ಫಾರ್ಮ್-ಟು-ಫೋರ್ಕ್ ವ್ಯಾಪಾರ ಮೇಳಕ್ಕೆ ಇಂದು ಚಾಲನೆ 
ನವದೆಹಲಿ, 8 ಜನವರಿ (ಹಿ.ಸ.) : ಆ್ಯಂಕರ್ : ನವದೆಹಲಿ-ಎನ್‌ಸಿಆರ್‌ನಲ್ಲಿ ಇಂದು ಫಾರ್ಮ್-ಟು-ಫೋರ್ಕ್ ವ್ಯಾಪಾರ ಮೇಳವು ಇಂಡಸ್‌ಫುಡ್ ೨೦೨೫ ಹೆಸರಿನಲ್ಲಿ ಪ್ರಾರಂಭಗೊಳ್ಳಲಿದೆ. ೩೦ ಕ್ಕೂ ಹೆಚ್ಚು ದೇಶಗಳಿಂದ ೨ ಸಾವಿರದ ೩೦೦ ಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಆಹಾರ ಸಂಸ್ಕ
’


ನವದೆಹಲಿ, 8 ಜನವರಿ (ಹಿ.ಸ.) :

ಆ್ಯಂಕರ್ :

ನವದೆಹಲಿ-ಎನ್‌ಸಿಆರ್‌ನಲ್ಲಿ ಇಂದು ಫಾರ್ಮ್-ಟು-ಫೋರ್ಕ್ ವ್ಯಾಪಾರ ಮೇಳವು ಇಂಡಸ್‌ಫುಡ್ ೨೦೨೫ ಹೆಸರಿನಲ್ಲಿ ಪ್ರಾರಂಭಗೊಳ್ಳಲಿದೆ.

೩೦ ಕ್ಕೂ ಹೆಚ್ಚು ದೇಶಗಳಿಂದ ೨ ಸಾವಿರದ ೩೦೦ ಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಕಾರ್ಯಕ್ರಮದ ೮ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

ಈ ಸಮಗ್ರ ವ್ಯಾಪಾರ ಮೇಳದಲ್ಲಿ ೭ ಸಾವಿರದ ೫೦೦ ಅಂತಾರಾಷ್ಟ್ರೀಯ ಖರೀದಿದಾರರು ಮತ್ತು ೧೫ ಸಾವಿರ ಭಾರತೀಯ ವ್ಯಾಪಾರ ವೀಕ್ಷಕರನ್ನು ನಿರೀಕ್ಷಿಸಲಾಗಿದೆ. ’ಇಂಡಸ್‌ಫುಡ್ ೨೦೨೫’ ವ್ಯವಹಾರ ವಿಸ್ತರಣೆಗೆ ಉತ್ತೇಜನ ನೀಡುತ್ತದೆ ಮತ್ತು ಮಾರುಕಟ್ಟೆ ಜ್ಞಾನವನ್ನು ಒದಗಿಸುತ್ತದೆ. ಈ ವರ್ಷದ ಆವೃತ್ತಿಯಲ್ಲಿ ೩೫ ಅಂತಾರಾಷ್ಟ್ರೀಯ ಅಡುಗೆ ಭಟ್ಟರು ಮತ್ತು ೧೦೦ ಭಾರತೀಯ ಪ್ರತಿನಿಧಿಗಳು, ವೃತ್ತಿಪರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನೇಪಥ್ಯದಲ್ಲಿ ಆಹಾರ ಉತ್ಪಾದನೆ ಮತ್ತು ಕೃಷಿ ತಂತಜ್ಞಾನ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ ಎರಡು ಶೃಂಗಸಭೆಗಳು ನಡೆಯಲಿವೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande