ಕೌಲಾಲಂಪುರ್, 8 ಜನವರಿ (ಹಿ.ಸ.) :
ಆ್ಯಂಕರ್ : ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಂದು ಭಾರತದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಕೌಲಾಲಂಪುರದಲ್ಲಿ ನಡೆಯುವ ಮಹಿಳಾ ಡಬಲ್ಸ್ ವಿಭಾಗದ ೧೬ನೇ ಸುತ್ತಿನ ಪಂದ್ಯದಲ್ಲಿ, ಚೀನಾದ ಜಾಂಗ್ ಶುಕ್ಸಿಯಾನ್ ಮತ್ತು ಜಿಯಾ ಯಿಫಾನ್ ಜೋಡಿಯನ್ನು ಎದುರಿಸಲಿದೆ.
ಭಾರತದ ಜೋಡಿ, ತಮ್ಮ ಆರಂಭಿಕ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಓರ್ನಿಚಾ ಜೊಂಗ್‌ಸಥಾಪೋರ್ನ್‌ಪಾರ್ನ್ ಮತ್ತು ಸುಕಿತ್ತಾ ಸುವಾಚಾಯ್ ಅವರನ್ನು ೨೧-೧೦, ೨೧-೧೦ ರಿಂದ ಸೋಲಿಸಿತು. ಮತ್ತೊಂದೆಡೆ, ಭಾರತದ ತಾರಾ ಷಟ್ಲರ್, ಲಕ್ಷ್ಯಸೇನ್ ೧೪-೨೧, ೭-೨೧ ನೇರ ಗೇಮ್‌ಗಳಲ್ಲಿ, ಚೈನೀಸ್ ತೈಪೆಯ, ಚಿಯು-ಜೆನ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ, ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ‘ಇಂದಿನ ಪ್ರಮುಖ ಪಂದ್ಯಗಳಲಿ, ಭಾರತದ ಮಾಳವಿಕಾ ಬನ್ಸೋಡ್, ಮಲೇಷ್ಯಾದ ಗೊಹ್ ಜಿನ್ ವೀ ಅವರನ್ನು ಎದುರಿಸಲಿದ್ದರೆ, ಆಕರ್ಷಿ ಕಶ್ಯಪ್, ಡ್ಯಾನಿಶ್ ಷಟ್ಲರ್ ಜೂಲಿ ಜಾಕೋಬ್ಸೆನ್ ಅವರೊಂದಿಗೆ ಸೆಣಸಲಿದ್ದಾರೆ.
೩೨ರ ಸುತ್ತಿನಲ್ಲಿ ಅನುಪಮಾ ಉಪಾಧ್ಯಾಯ, ಥಾಯ್ಲೆಂಡ್‌ನ ಪೋರ್ನ್ಪಾವೀ ಚೋಚುವಾಂಗ್ ಅವರನ್ನು ಮುಖಾಮುಖಿಯಾಗಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಪ್ರಿಯಾಂಶು ರಾಜಾವತ್, ಚೀನಾದ ಲಿ ಶಿಫೆಂಗ್ ವಿರುದ್ಧ ಸೆಣಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ