ಹುಬ್ಬಳ್ಳಿ, 06 ಜನವರಿ (ಹಿ.ಸ.) :
ಆ್ಯಂಕರ್ : ರಾಧಾ ಸೋಮಿ ವಾರ್ಷಿಕ ಸತ್ಸಂಗಕ್ಕೆ ಹಾಜರಾಗುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 12975 ಮೈಸೂರು-ಜೈಪುರ ದ್ವಿ-ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಶಿಯೋದಾಸ್ಪುರ ಪದಂಪುರ ನಿಲ್ದಾಣದಲ್ಲಿ ಎರಡು ನಿಮಿಷ ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ವಾಯುವ್ಯ ರೈಲ್ವೆ ಸೂಚಿಸಿದೆ. ಈ ಕೆಳಗಿನ ವೇಳಾಪಟ್ಟಿಯ ಪ್ರಕಾರ ರೈಲು ಶಿಯೋದಾಸ್ಪುರ ಪದಂಪುರ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ಜನವರಿ 9 ಮತ್ತು 11, 2025 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 12975 ಮೈಸೂರು-ಜೈಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಶಿಯೋದಾಸ್ಪುರ ಪದಂಪುರ ನಿಲ್ದಾಣಕ್ಕೆ 05:27 ಗಂಟೆಗೆ ತಲುಪಿ, 05:29 ಗಂಟೆಗೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa