ನವದೆಹಲಿ, 7 ಜನವರಿ (ಹಿ.ಸ.) :
ಆ್ಯಂಕರ್ :ಟಿಬೇಟ್-ನೇಪಾಳ ಗಡಿ ಭಾಗದಲ್ಲಿ ಇಂದು ಬೆಳಗ್ಗೆ ೭.೧ ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದಿಂದಾಗಿ ಕನಿಷ್ಠ ೫೩ ಮಂದಿ ಸಾವನ್ನಪ್ಪಿದ್ದು, ೬೨ ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಟಿಬೇಟ್‌ನಲ್ಲಿರುವ ಕ್ಸೀಝಾಂಗ್ ಭೂಕಂಪದ ಕೇಂದ್ರ ಬಿಂದು ಎಂದು ಪರಿಗಣಿಸಲಾಗಿದೆ.ಒಂದೂವರೆ ಗಂಟೆ ಅವಧಿಯೊಳಗೆ ಆರು ಬಾರಿ ಭೂಕಂಪ ಸಂಭವಿಸಿವೆ. ಭೂಕಂಪದ ತೀವ್ರತೆಯಿಂದಾಗಿ ಬಿಹಾರ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಸೇರಿದಂತೆ ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರ ನಡುವೆ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲೂ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ೪.೯ ತೀವ್ರತೆ ದಾಖಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ