ಬಳ್ಳಾರಿ, 07 ಜನವರಿ (ಹಿ.ಸ.) :
ಆ್ಯಂಕರ್ : 2025ರ ಜನವರಿ 5 ಮತ್ತು 6ರಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ `ಯುವಜನೋತ್ಸವ ವಿಜ್ಞಾನ ಮೇಳ'ದಲ್ಲಿ
ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ (ಬಿಐಟಿಎಂ) ಕಾಲೇಜಿನ ಬಿ.ಇ. 7ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಹರ್ಷ ಜೆ.ಎನ್., ಹರ್ಷಲ್ ಎಚ್., ಹನೀಷ್ ಪೆಸ್ಸಿ, ಗೂಳಪ್ಪ ಮತ್ತು ಮಾರ್ಗದರ್ಶಕ ಜಿ. ಹರೀಶ್ ಕುಮಾರ್ ಅವರು ಪ್ರದರ್ಶಿಸಿದ `ಸೌರಶಕ್ತಿಯನ್ನು ಬಳಸಿಕೊಂಡು ಸ್ಮಾರ್ಟ್ ವೈರ್‍ಲೆಸ್ ಎಲೆಕ್ಟ್ರಿಕಲ್ ವೆಹಿಕಲ್ ಚಾಜಿರ್ಂಗ್' ಯೋಜನೆಗೆ ಪ್ರಥಮ ಪ್ರಶಸ್ತಿ ಸಿಕ್ಕಿದೆ.
ಈ ತಂಡವು 2025ರ ಜನವರಿ 8 ರಂದು ನವದೆಹಲಿಯಲ್ಲಿ ನಡೆಯಲಿರುವ `ರಾಷ್ಟ್ರೀಯ ಯುವಜನೋತ್ಸವ - 2025'ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್