ಸ್ಕ್ವಾಷ್ ಪಂದ್ಯಾವಳಿ : ಭಾರತದ ಅನಾಹತ್ ಸಿಂಗ್ ಫೈನಲ್‌ಗೆ ಪ್ರವೇಶ
ಬರ್ಮಿಂಗ್‌ಹ್ಯಾಮ್‌, 6 ಜನವರಿ (ಹಿ.ಸ.): ಆ್ಯಂಕರ್ : ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಬ್ರಿಟಿಷ್ ಜೂನಿಯರ್ ಓಪನ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಭಾರತದ ಅನಾಹತ್ ಸಿಂಗ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ೧೭ ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಸೆಮಿ ಫೈನಲ್‌ನ
ಸ್ಕ್ವಾಷ್ ಪಂದ್ಯಾವಳಿ : ಭಾರತದ ಅನಾಹತ್ ಸಿಂಗ್ ಫೈನಲ್‌ಗೆ ಪ್ರವೇಶ


ಬರ್ಮಿಂಗ್‌ಹ್ಯಾಮ್‌, 6 ಜನವರಿ (ಹಿ.ಸ.): ಆ್ಯಂಕರ್ :

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಬ್ರಿಟಿಷ್ ಜೂನಿಯರ್ ಓಪನ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಭಾರತದ ಅನಾಹತ್ ಸಿಂಗ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

೧೭ ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಸೆಮಿ ಫೈನಲ್‌ನಲ್ಲಿ ಅವರು ಈಜಿಪ್ಟ್‌ನ ರುಕಯ್ಯ ಸಲೇಂ ಅವರನ್ನು ೩-೧ ಅಂತರದಿಂದ ಸೋಲಿಸಿದರು. ಅನಾಹತ್ ಅಂತಿಮ ಹಣಾಹಣಿಯಲ್ಲಿ ಈಜಿಪ್ಟ್‌ನ ಮಲಿಕಾ ಎಲ್ ಕರಾಕ್ಸಿಯನ್ನು ಎದುರಿಸಲಿದ್ದಾರೆ. ಮಲಿಕಾ ಎಲ್ ಕರಾಕ್ಸಿ ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ನ ಹೆಲೆನ್ ಟ್ಯಾಂಗ್ ಅವರನ್ನು ೩-೧ ಅಂತರದಿಂದ ಸೋಲಿಸಿದ್ದರು. ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ನಂತರ ಬ್ರಿಟಿಷ್ ಜೂನಿಯರ್ ಓಪನ್ ಅನ್ನು ಎರಡನೇ ಅತ್ಯಂತ ಪ್ರತಿಷ್ಠಿತ ಜೂನಿಯರ್ ಓಪನ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಎಂದು ಪರಿಗಣಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande