ಕೋಲಾರ, ಜನವರಿ ೨೩, (ಹಿ.ಸ) :
ಆ್ಯಂಕರ್ : ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಗ್ರಾಮೀಣ ಸೊಗಡು ಮಾಧ್ಯಮಗಳ ಪ್ರಭಾವದಿಂದ ಕಣ್ಮರೆಯಾಗುತ್ತಿವೆ. ಕಲಾವಿದರು ಗ್ರಾಮೀಣ ಸೊಗಡನ್ನು ಉಳಿಸುವ ಜೊತೆಗೆ ಕನ್ನಡದ ವಾತಾವರಣ ಉಳಿಸಿ ಬೆಳೆಸಬೇಕೆಂದು ಶಿಕ್ಷಕ ಹಾಗೂ ಸಮಾಜ ಸೇವಕ ಪಿ.ನಾಗರಾಜ್ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಕಲ್ಲೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಅಯೋದ್ಯೆಯ ಶ್ರೀರಾಮ ಮಾದರಿಯ ರಾಮಲಲ್ಲಾ ಪ್ರತಿಷ್ಠಾಪನಾ ಪ್ರಯುಕ್ತ ರಾಮಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲ್ಲೂರು ಗ್ರಾಮದಲ್ಲಿ ೨೪ ಗಂಟೆಗಳ ಕಾಲ ನಡೆದಂತಹ ರಾಮಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಅಯೋಜಕರಾದ ಕೆ.ಎನ್.ಮುನೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಸಿ.ಚೌಡಪ್ಪ, ಆರ್.ಚಲಪತಿ, ಲಕ್ಷö್ಮಣ್ ನಂಜು0ಡಪ್ಪ, ಬಚ್ಚಿರೆಡ್ಡಿ, ಕೆ.ಬಿ. ನಂಜಪ್ಪ, ಗೋಪಾಲರೆಡ್ಡಿ, ಮಂಜುನಾಥಸ್ವಾಮಿ, ನಾರಾಯಣಸ್ವಾಮಿ, ದೇವರಾಜ್, ಕಲ್ಲೂರು ರಮೇಶ್ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಕಲ್ಲೂರಿನಲ್ಲಿ ರಾಮಕೋಟಿ ಜಪಯಜ್ಞ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್