ಮೆಡಿಕಲ್ ಕಾಲೇಜ್ ಕಾರ್ಮಿಕರ ಗಲಾಟೆ : ನಾಲ್ವರ ಬಂಧನ  
ಹುಬ್ಬಳ್ಳಿ, 02 ಜನವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿಯ ಬಿಡನಾಳ-ಗಬ್ಬೂರ ರಸ್ತೆಯಲ್ಲಿರುವ ಕೆಎಲ್‌ಇ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಉಪ ಪೋಲಿಸ ಆಯುಕ್ತ ಮಹನಿಂಗ ನಂದಗಾವಿ
Arrest.


ಹುಬ್ಬಳ್ಳಿ, 02 ಜನವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿಯ ಬಿಡನಾಳ-ಗಬ್ಬೂರ ರಸ್ತೆಯಲ್ಲಿರುವ ಕೆಎಲ್‌ಇ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಉಪ ಪೋಲಿಸ ಆಯುಕ್ತ ಮಹನಿಂಗ ನಂದಗಾವಿ ಹೇಳಿದರು.

ನೀರಿನ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಬಿಹಾರ ಮೂಲದ ಸಂತೋಷ (೫೪), ಬಚ್ಚು (೪೦), ಬಿಕ್ರಮ (೩೪) ಎಂಬಾತರು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ಸುಗ್ರಿನ್, ನವೀನ, ಶಿವಕುಮಾರ್, ಗೋವಿಂದ ಎಂಬಾತರನ್ನು ಬಂಧಿಸಿದ್ದು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande