ಹುಲಿಗಿಯಲ್ಲಿ ಮೈಸೂರು ರಾಮಚಂದ್ರಚಾರ್ ದಾಸವಾಣಿ
ಹುಲಿಗಿಯಲ್ಲಿ ಮೈಸೂರು ರಾಮಚಂದ್ರಚಾರ್ ದಾಸವಾಣಿ
ಹುಲಿಗಿಯಲ್ಲಿ ಮೈಸೂರು ರಾಮಚಂದ್ರಚಾರ್ ದಾಸವಾಣಿ


ಕೊಪ್ಪಳ, 12 ನವೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾದ ಹುಲಿಗಿಯಲ್ಲಿ ಖ್ಯಾತ ಸಂಕೀರ್ತನಕಾರರಾದ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಜನೆವರಿ ೫ ರಂದು ಜರುಗಲಿದೆ.

ಈ ಕುರಿತು ಜ್ಞಾನ ಸತ್ರವಾಹಿನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅರ್ಚಕ ಪ್ರಾಣೇಶ್ ಆಚಾರ್ ಅವರು ಪ್ರಕಟಣೆ ನೀಡಿದ್ದು, ಸಂಜೆ ೬ ಗಂಟೆಯಿ0ದ ರಾತ್ರಿ ೯ ಗಂಟೆಯವರೆಗೆ ದಾಸವಾಣಿ ಕಾರ್ಯಕ್ರಮ ಜರುಗಲಿದೆ. ಕನಕ ದಾಸರು, ಪುರಂದರ ದಾಸರು, ಜಗನ್ನಾಥ ದಾಸರು, ಗೋಪಾಲದಾಸರು ಮತ್ತು ವಿಜಯದಾಸರಾದಿಯಾಗಿ ಅನೇಕ ಹರಿದಾಸರ ಕೀರ್ತನೆ, ಉಗಾಭೋಗ ಮತ್ತು ಸುಳಾದಿಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸದ್ಭಕ್ತರು ಮತ್ತು ಹರಿದಾಸ ಕೀರ್ತನೆಯ ಶ್ರೋತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande