`ವಕ್ಫ್ ಹಠಾವೋ, ದೇಶ ಬಚಾವೋ' ; ಕಂಪ್ಲಿಯಿಂದ ಯತ್ನಾಳ್ ಪ್ರತಿಭಟನೆ ಪ್ರಾರಂಭ
ಕಂಪ್ಲಿ, 04 ಜನವರಿ (ಹಿ.ಸ.) : ಆ್ಯಂಕರ್ : ಬಿಜೆಪಿಯ ಭಿನ್ನಮತೀಯ ಬಣದ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ `ಬಿ' ಟೀಂ ವಕ್ಫ್‍ಬೋರ್ಡ್ ವಿರುದ್ಧ ಶನಿವಾರದಿಂದ ಕಂಪ್ಲಿಯಿಂದ ಎರಡನೇ ಸುತ್ತಿನ ಹೋರಾಟವನ್ನು ಪ್ರಾರಂಭ ಮಾಡಿ, ಪಕ್ಷದ ಗಮನ ಸೆಳೆದಿದೆ. ಕಂಪ್ಲಿ ತಾಲೂಕು ಕೆಂದ್ರದಿಂದ
`ವಕ್ಫ್ ಹಠಾವೋ, ದೇಶ ಬಚಾವೋ' ; ಯತ್ನಾಳ್ ಕಂಪ್ಲಿಯಿಂದ ಪ್ರತಿಭಟನೆ ಪ್ರಾರಂಭ


`ವಕ್ಫ್ ಹಠಾವೋ, ದೇಶ ಬಚಾವೋ' ; ಯತ್ನಾಳ್ ಕಂಪ್ಲಿಯಿಂದ ಪ್ರತಿಭಟನೆ ಪ್ರಾರಂಭ


`ವಕ್ಫ್ ಹಠಾವೋ, ದೇಶ ಬಚಾವೋ' ; ಯತ್ನಾಳ್ ಕಂಪ್ಲಿಯಿಂದ ಪ್ರತಿಭಟನೆ ಪ್ರಾರಂಭ


ಕಂಪ್ಲಿ, 04 ಜನವರಿ (ಹಿ.ಸ.) :

ಆ್ಯಂಕರ್ : ಬಿಜೆಪಿಯ ಭಿನ್ನಮತೀಯ ಬಣದ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ `ಬಿ' ಟೀಂ ವಕ್ಫ್‍ಬೋರ್ಡ್ ವಿರುದ್ಧ ಶನಿವಾರದಿಂದ ಕಂಪ್ಲಿಯಿಂದ ಎರಡನೇ ಸುತ್ತಿನ ಹೋರಾಟವನ್ನು ಪ್ರಾರಂಭ ಮಾಡಿ, ಪಕ್ಷದ ಗಮನ ಸೆಳೆದಿದೆ.

ಕಂಪ್ಲಿ ತಾಲೂಕು ಕೆಂದ್ರದಿಂದ `ಜನಜಾಗೃತಿ' ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಸೇರಿದಂತೆ ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹೋರಾಟಕ್ಕೆ ಸಾಥ್ ನೀಡಿದರು.

ಕಂಪ್ಲಿಯ ಉದ್ಭವ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ `ವಕ್ಫ್ ಹಠಾವೋ, ದೇಶ ಬಚಾವೋ' ಘೋಷವಾಕ್ಯದ ಜೊತೆ

ಪ್ರಾರಂಭವಾದ ಪ್ರತಿಭಟನೆಯು ನಡುವಲ ಮಸೀದಿ, ಡಾ. ರಾಜಕುಮಾರ ರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಸರ್ಕಾರಿ ಆಸ್ಪತ್ರೆ ಬಳಿಯ ಶಾರದಾ ಶಾಲೆಗೆ ಆಗಮಿಸಿ, ಸಾರ್ವಜನಿಕ ಸಭೆಯಲ್ಲಿ ಸಮಾರೋಪಗೊಂಡಿತು.

ಮೆರವಣಿಗೆಯ ಉದ್ದಕ್ಕೂ `ವಕ್ಫ್ ಹಠಾವೋ, ದೇಶ ಬಚಾವೋ' ಘೋಷಣೆಗಳನ್ನು ನಿರಂತರ ಕೂಗಲಾಗುತ್ತಿತ್ತು. ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಸ್ವಾಮೀಜಿ, ಅಭಿನವ ಪ್ರಭುಸ್ವಾಮಿ, ಮುಖಂಡರಾದ ಜಿ.ಎಂ. ಸಿದ್ದೇಶ್ವರ, ಬಿ.ವಿ. ನಾಯಕ್ ಸೇರಿದಂತೆ ನಾಗರೀಕ ಹಿತರಕ್ಷಣಾ ಸಮಿತಿಯ ಸಂಚಾಲಕ ಎಂ. ಭರತ್ ಹಾಗೂ ಗಣ್ಯರು ಮತ್ತು ರೈತರು ಪಾಲ್ಗೊಂಡಿದ್ದರು.

ಭಿನ್ನರ ಗುಂಪಿನಲ್ಲಿ ಎಲ್ಲೂ ಗುರುತಿಸಿಕೊಳ್ಳದ ಕಂಪ್ಲಿ ಮತ್ತು ಬಳ್ಳಾರಿಯ ಬಿಜೆಪಿ ಮುಖಂಡರು - ಕಾರ್ಯಕರ್ತರು ಹಾಗೂ ಅಭಿಮಾನಿಗಳು ; ಬಿಜೆಪಿ ಹಿಂಬಾಲಕರು ಈ ಹೋರಾಟದಲ್ಲಿ ಕಾಣಿಸಿಕೊಳ್ಳಲಿಲ್ಲ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande