ಲಿಂಗಸೂಗೂರು ನವೋದಯ ವಿದ್ಯಾಲಯದ ಪ್ರವೇಶ ಪತ್ರ ಲಭ್ಯ 
ಲಿಂಗಸೂಗೂರು, 02 ಜನವರಿ (ಹಿ.ಸ.) : ಆ್ಯಂಕರ್ : ಲಿಂಗಸೂಗೂರು ತಾಲೂಕಿನ ಮುದಗಲ್ ಪಿ.ಎಮ್.ಶ್ರೀ ಜವಾಹರ ನವೋದಯ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ. ಪ್ರವೇಶ ಪತ್ರವು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಅರ್
ಲಿಂಗಸೂಗೂರು ನವೋದಯ ವಿದ್ಯಾಲಯದ ಪ್ರವೇಶ ಪತ್ರ ಲಭ್ಯ 


ಲಿಂಗಸೂಗೂರು, 02 ಜನವರಿ (ಹಿ.ಸ.) :

ಆ್ಯಂಕರ್ : ಲಿಂಗಸೂಗೂರು ತಾಲೂಕಿನ ಮುದಗಲ್ ಪಿ.ಎಮ್.ಶ್ರೀ ಜವಾಹರ ನವೋದಯ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ.

ಪ್ರವೇಶ ಪತ್ರವು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ವಿದ್ಯಾಲಯದ ವೆಬ್‍ಸೈಟ್ ವಿಳಾಸ; https://navodaya.gov.in ಅಥವಾ https://cbseitms.rcil.gov.in/nvsclass6 ಬಳಸಿ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ. ಪರೀಕ್ಷೆವು ಇದೇ 2025ರ ಜ.18ರ ಶನಿವಾರ ದಂದು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9703473495, 7204109046ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande