ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಪ್ರಕರಣ :  ಆರೋಪಿ ಬಂಧನ   
ಚಲನಚಿತ್ರ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದ್ದು, ಆತ ಬಾಂಗ್ಲಾದೇಶದವನೆಂದು ಶಂಕಿಸಲಾಗಿದೆ.
ಚಲನಚಿತ್ರ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದ್ದು, ಆತ ಬಾಂಗ್ಲಾದೇಶದವನೆಂದು ಶಂಕಿಸಲಾಗಿದೆ.


ಮುಂಬೈ, 19 ಜನವರಿ (ಹಿ.ಸ.) :

ಆ್ಯಂಕರ್ :

ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂಬ ವ್ಯಕ್ತಿಯನ್ನು ಭಾನುವಾರ ಬೆಳಿಗ್ಗೆ ಥಾಣೆ ಜಿಲ್ಲೆಯ ಕಾಸರ್ವಾಡವಲಿ ಪ್ರದೇಶದ ಕಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈತ ಬಾಂಗ್ಲಾ ಮೂಲದವನಾಗಿರಬಹುದು ಎಂದು ಮುಂಬೈ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಯ ಬಳಿ ತನ್ನ ಭಾರತೀಯ ಗುರುತನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ, ಆದ್ದರಿಂದ ಬಂಧಿತ ವ್ಯಕ್ತಿ ಬಾಂಗ್ಲಾದೇಶಿ ಪ್ರಜೆಯಾಗಿರುವ ಸಾಧ್ಯತೆಯಿದೆ.

ಎಂದು ಪೋಲಿಸರು ಶಂಕಿಸಿದ್ದಾರೆ.

ಈ ಕುರಿತು

ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಮ್ ಮಾಹಿತಿ ನೀಡಿದ್ದು

ಬಂಧಿತ ಆರೋಪಿ ದರೋಡೆ ಮಾಡಲು ನಟ ಸೈಫ್ ಅಲಿ ಖಾನ್ ಮನೆಗೆ ಪ್ರವೇಶಿಸಿದ್ದ ಆದರೆ, ಆತನನ್ನು ಎಲ್ಲಾ ಕೋನಗಳಿಂದಲೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತೀವ್ರ ವಿಚಾರಣೆ ವೇಳೆ ಈತ

ಬಾಂಗ್ಲಾದೇಶಿ ಪ್ರಜೆ ಎಂದು ತಿಳಿದು ಬಂದಿದೆ ಎಂದ ಅವರು ಆರೋಪಿಯು ಸೈಫ್ ಅಲಿಖಾನ ಮನೆ ಕೆಲಸಕ್ಕೆ ಸಿಬ್ಬಂದಿ ಪೊರೈಸುವ ಗುತ್ತಿಗೆ ಸಂಸ್ಥೆಗೆ ಸೇರಿದವನೆಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಮ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande