ಪ್ರಕೃತಿ ಮನುಷ್ಯ ಸಂಬ0ಧಗಳನ್ನು ಬೆಸೆಯುವ ಪೊಂಗಲ್ ಕೆಜಿಎಫ್ ನಗರದಲ್ಲಿ ಆಚರಣೆ
ಪ್ರಕೃತಿ ಮನುಷ್ಯ ಸಂಬ0ಧಗಳನ್ನು ಬೆಸೆಯುವ ಪೊಂಗಲ್ ಕೆಜಿಎಫ್ ನಗರದಲ್ಲಿ ಆಚರಣೆ
ಕೆಜಿಎಫ್ ನಗರದ ಎಸ್.ಟ. ಬ್ಲಾಕ್‌ನಲ್ಲಿ ಮಂಗಳವಾರ ಮಹಿಳೆಯರು ಮಣ್ಣಿನ ಮಡಿಕೆಗಳಲ್ಲಿ ಸಿಹಿ ಪೊಂಗಲ್ ತಯಾರಿಸಿ ಸೂರ್ಯನಿಗೆ ಅರ್ಪಿಸಿದರು.


ಕೆಜಿಎಫ್ ನಗರದಲ್ಲಿ ಪೊಂಗಲ್ ಅಂಗವಾಗಿ ಸಂತ ಮತ್ತು ದಾರ್ಶನಿಕ ತಿರುವಳ್ಳಾರ್ ಮೆರಣಿಗೆ ನಡೆಯಿತು.


ಕೋಲಾರ, ೧೪ ಜನವರಿ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಪೊಂಗಲ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮನೆಗಳ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿ ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಸಾಮೂಹಿಕವಾಗಿ ಸಿಹಿ ಪೊಂಗಲ್ ತಯಾರಿಸಿ ಸೂರ್ಯನಿಗೆ ಅರ್ಪಿಸಿದರು.

ಕರ್ನಾಟಕದ ಗಡಿ ಭಾಗವಾದ ಕೆಜಿಎಫ್ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ತಲಮಾರುಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಕಾರ್ಮಿಕರು ಈಗಲೂ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿದ್ದಾರೆ. ಕೆಜಿಎಫ್‌ನಲ್ಲಿ ಪೊಂಗಲ್ ಹಬ್ಬವನ್ನು ವಿಜೃಂಬಣೆಯಿ0ದ ಆಚರಿಸುತ್ತಾರೆ. ಮೊದಲನೇ ದಿನ ಮನೆಯಲ್ಲಿರುವ ಹಳೆ ವಸ್ತುಗಳನ್ನು ಸುಡುವ ಮೂಲಕ ನವೀಕರಣ ಮತ್ತು ಹೊಸತನವನ್ನು ಸ್ವಾಗತಿಸುತ್ತಾರೆ.

ಜನವರಿ ೧೪ರಂದು ಪೊಂಗಲ್ ಆಚರಿಸಲಾಗುವುದು, ಮನೆಗಳ ಮುಂದೆ ರಂಗೋಲಿಯಿ0ದ ಶೃಂಗರಿಸಲಾಗುವುದು. ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಪೊಂಗಲ್ ಆಚರಿಸಲಾಗುವುದು. ಮನೆಯ ಹೊರಗೆ ನೈಸರ್ಗಿಕವಾಗಿ ಸಿಹಿ ಪೊಂಗಲ್ ತಯಾರು ಮಾಡಲಾಗುತ್ತದೆ. ಮನೆಯ ಮುಂದೆ ಕಟ್ಟಿಗೆಯ ಒಲೆ ಇರಿಸಿ ಮಣ್ಣಿನ ಮಡಿಕೆಯನ್ನು ಬಣ್ಣದಿಂದ ಅಲಂಕರಿಸಿ ಅದರಲ್ಲಿ ಅಕ್ಕಿ, ಬೆಲ್ಲ, ಹಾಲು, ದ್ರಾಕ್ಷಿ, ಗೋಡಂಬಿ ಹಾಕಿ ಸಿಹಿ ಪೊಂಗಲ್ ತಯಾರಿಸುತ್ತಾರೆ. ಸಿಹಿ ಪೊಂಗಲ್‌ಅನ್ನು ಸೂರ್ಯ ದೇವನಿಗೆ ಅರ್ಪಿಸಲು ಸೂರ್ಯನ ಕಿರಣಗಳ ಅಡಿಯಲ್ಲಿ ತಯಾರು ಮಾಡಲಾಗುತ್ತದೆ.

ಈ ಪೊಂಗಲ್ ಆಚರಣೆ ಪ್ರಕೃತಿ ಮತ್ತು ಮನುಷ್ಯನ ಸಂಬ0ಧಗಳನ್ನು ಬೆಸೆಯುವ ಆಚರಣೆಯಾಗಿದೆ. ಪೊಂಗಲ್ ಸಮೃದ್ದಿಯ ಸಂಕೇತನವೂ, ಪ್ರಕೃತಿಯನ್ನು ಆರಾಧಿಸಲು ಪೊಂಗಲ್ ಸಮರ್ಪಿಸುವ ಹಬ್ಬವಾಗಿದೆ. ಮರುದಿನ ದನಕರುಗಳನ್ನು ಸಿಂಗರಿಸಿ ಹಬ್ಬರಿಸಿ ಮಾಟಪೊಂಗಲ್ ಆಚರಿಸಲಾಗುವುದು ಎಂದು ಕೆಜಿಎಫ್ ನಗರದಲ್ಲಿ ಪಂರಪ0ರೆಯಿ0ದ ಆಚರಿಸಲಾಗುತ್ತಿರುವ ಪೊಂಗಲ್ ಹಬ್ಬ ಬಗ್ಗೆ ಶಿಕ್ಷಕ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ವಿವರಿಸಿದರು.

ಕೆಜಿಎಫ್ ನಗರದ ವಕೀಲ ಜ್ಯೋತಿಬಸು ಮಾತನಾಡಿ ಕೆಜಿಎಫ್ ನಗರದಲ್ಲಿ ಕಳೆದ ೪೦ ವರ್ಷಗಳಿಂದ ಸಮತೋ ಪೊಂಗಲ್ ಆಚರಿಸುವ ಮೂಲಕ ಸಾಮರಸ್ಯವನ್ನು ಸಾರಲಾಗುತ್ತಿದೆ ಎಲ್ಲರೂ ಬೇದಭಾವ ತೊರೆದು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸಂತ ಮತ್ತು ದಾರ್ಶನಿಕ ತಿರುವಳ್ಳಾರ್ ಮೆರವಣಿಗೆ ನಡೆಸಲಾಯಿತು. ಪ್ರಪಂಚದ ದಾರ್ಶನಿಕ ಮತ್ತು ಸಂತ ತಿರುವಳ್ಳಾರ್ ಅವರಿಗೆ ನಮನ ಸಲ್ಲಿಸಲಾಯಿತು. ಅವರೊಂದಿಗೆ ಕನ್ನಡದ ಸರ್ವಜ್ಞನಿಗೂ ನಮನ ಸಲ್ಲಿಸಲಾಯಿತು. ಸಮತೋ ಪೊಂಗಲ್‌ನಲ್ಲಿ ಎಲ್ಲರೂ ಜಾತಿ, ಧರ್ಮ, ಭಾಷೆ ಬಿಟ್ಟು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಎಲ್ಲಾ ಭಾಷಿಕರು ಮತ್ತು ರಾಜಕೀಯ ಪಕ್ಷಗಳ ದುರೀಣರು ಭಾಗವಹಿಸಿದ್ದರು.

ಚಿತ್ರಗಳು :

೧. ಕೆಜಿಎಫ್ ನಗರದ ಎಸ್.ಟ. ಬ್ಲಾಕ್‌ನಲ್ಲಿ ಮಂಗಳವಾರ ಮಹಿಳೆಯರು ಮಣ್ಣಿನ ಮಡಿಕೆಗಳಲ್ಲಿ ಸಿಹಿ ಪೊಂಗಲ್ ತಯಾರಿಸಿ ಸೂರ್ಯನಿಗೆ ಅರ್ಪಿಸಿದರು.

೨. ಕೆಜಿಎಫ್ ನಗರದಲ್ಲಿ ಪೊಂಗಲ್ ಅಂಗವಾಗಿ ಸಂತ ಮತ್ತು ದಾರ್ಶನಿಕ ತಿರುವಳ್ಳರ್ ಮೆರವಣಿಗೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande