ಕೋಲಾರ, ೧೪ ಜನವರಿ (ಹಿ.ಸ) :
ಆ್ಯಂಕರ್ : ಕಾಡಾನೆಗಳ ವಿರುದ್ಧ ದಿನದ ೨೪ ಗಂಟೆ ಪ್ರಾಣವನ್ನು ಲೆಕ್ಕಿಸದೆ ಸೇವೆ ಸಲ್ಲಿಸುವ ಗಡಿಭಾಗದ ಅರಣ್ಯ ಅಧಿಕಾರಿಗಳೊಂದಿಗೆ ಕದಿರಿನತ್ತ ಗ್ರಾಮಸ್ಥರು ಸಂಕ್ರಾ0ತಿ ಹಬ್ಬವನ್ನು ಎಳ್ಳು-ಬೆಲ್ಲ-ಕಬ್ಬು ನೀಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಿದರು.
ಹತ್ತಾರು ವರ್ಷಗಳಿಂದ ಗಡಿಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರ ಬೆಳೆ ಪ್ರಾಣವನ್ನು ರಕ್ಷಣೆ ಮಾಡುತ್ತಿರುವ ಅರಣ್ಯ ಸಿಬ್ಬಂದಿಯ ಸೇವೆ ಖಂಡಿತವಾಗಲು ಮರೆಯಲಾಗದು ಎಂದು ಕದಿರಿನತ್ತ ಗ್ರಾಮಸ್ಥರಾದ ಶ್ರೀರಾಮ್ ಮತ್ತು ಗುಲ್ಲಟ್ಟಿ ಅರಣ್ಯ ಅಧಿಕಾರಿಗಳ ಸೇವೆ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಸರ್ಕಾರ ಅರಣ್ಯ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಗಡಿಭಾಗದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕುಟುಂಬವನ್ನು ಬಿಟ್ಟು ರಾತ್ರಿ ಹಗಲು ಆನೆಗಳ ವಿರುದ್ಧ ಹೋರಾಡುವ ಇವರ ಸೇವೆ ಅನನ್ಯ. ಅರಣ್ಯ ಸಿಬ್ಬಂದಿಯ ರಕ್ಷಣೆಯೇ ಗಡಿ ಭಾಗದ ಹತ್ತಾರು ಹಳ್ಳಿಗಳ ರೈತರು ನೆಮ್ಮದಿಯಿಂದ ಜೀವನ ಮಾಡಲು ಸಹಕಾರ ಎಂದು ಅವರ ನಿರಂತರ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಬಂಗಾರಪೇಟೆ ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್ ಮಾತನಾಡಿ, ಪ್ರತಿವರ್ಷ ಸಂಕ್ರಾ0ತಿ ಹಬ್ಬವನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆ ಮಾಡುವುದು ಸಂಪ್ರದಾಯ. ಆದರೆ, ಈ ವರ್ಷ ವಿಶಿಷ್ಟವಾಗಿ ಆಚರಣೆ ಮಾಡಬೇಕೆಂದು ಗ್ರಾಮಸ್ಥರು ಮತ್ತು ರೈತಸಂಘದ ನಿರ್ಣಯದಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮದಲ್ಲಿಯೇ ವಿಶೇಷವಾಗಿ ಅವರನ್ನು ಕರೆದು ಹಸಿರುಶಾಲು ಹೊದಿಸಿ ಎಳ್ಳು ಬೆಲ್ಲ ಕೊಟ್ಟು ಪ್ರೀತಿ ವಿಶ್ವಾಸದ ಸಂಕೇತ ಈ ಸಂಕ್ರಾ0ತಿ ನಿಮ್ಮ ಜೀವನದಲ್ಲಿ ಆರೋಗ್ಯ ಐಶ್ವರ್ಯ ಭಗವಂತ ನೀಡಲಿ ಎಂದು ಹಿರಿಯರು ಆಶೀರ್ವಾದ ಮಾಡುವ ಮುಖಾಂತರ ಅರಣ್ಯಾಧಿಕಾರಿಗಳೊಂದಿಗೆ ಹಬ್ಬ ಆಚರಣೆ, ಗ್ರಾಮಸ್ಥರಿಗೆ ಖುಷಿ ತಂದಿದೆ ಎಂದು ಸಂತೋಷವನ್ನು ಹಂಚಿಕೊ0ಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರ ಪ್ರೀತಿ ವಿಶ್ವಾಸದ ಸಂಕ್ರಾ0ತಿ ಹಬ್ಬದ ಸನ್ಮಾನ, ಎಳ್ಳು ಬೆಲ್ಲ ಸ್ವೀಕರಿಸಿದ ಅರಣ್ಯಾಧಿಕಾರಿ ನಾಗೇಶ್ ಮಾತನಾಡಿ, ಗ್ರಾಮಸ್ಥರು ಹಾಗೂ ರೈತಸಂಘದ ಕಾರ್ಯಕರ್ತರು ನೀಡಿರುವ ಮಕರ ಸಂಕ್ರಾ0ತಿಯ ಪ್ರೀತಿಯ ಉಡುಗೊರೆ ಬೆಲೆ ಕಟ್ಟಲಾಗದು. ನಿಮ್ಮ ಈ ಒಂದು ಪ್ರೀತಿಯೇ ನಮಗೆ ಇನ್ನೂ ಹೆಚ್ಚಿನ ಗ್ರಾಮೀಣ ಸೇವೆ ಮಾಡಲು ಪ್ರೇರೇಪಣೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಗಿರೀಶ್, ಪುತ್ತೇರಿ ರಾಜು, ಎಲ್ಲೋಜಿರಾವ್, ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಲಕ್ಷö್ಮಣ್, ಸಂತೋಷ್, ಗೋವಿಂದಪ್ಪ, ರಾಮೋಜಿರಾವ್, ವಿಶ್ವ, ಗ್ರಾಮಸ್ಥರು ಭಾಗವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ರೈತ ಸಂಘದ ಪ್ರತಿನಿಧಿಗಳು ಸಂಕ್ರಾ0ತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್