ಮೆಲ್ಬೋರ್ನ್,14 ಜನವರಿ (ಹಿ.ಸ.) :
ಆ್ಯಂಕರ್ :ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಆರಂಭಿಕ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕೊಲಂಬಿಯಾದ ನಿಕೋಲಸ್ ಬ್ಯಾರಿಂಟೋಸ್ ಕಣಕ್ಕಿಳಿಯಲಿದ್ದಾರೆ.
ಭಾರತ - ಕೊಲಂಬಿಯಾದ ಜೋಡಿ ಸ್ಪೇನ್ ನ ಪೆಡ್ರೊ ಮಾರ್ಟಿನೆಜ್ ಮತ್ತು ಜೌಮ್ ಮುನಾರ್ ಅವರನ್ನು ಎದುರಿಸಲಿದ್ದಾರೆ.
ಈ ಮಧ್ಯೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತರಾದ ಜನ್ನಿಕ್ ಸಿನ್ನರ್, ಕಾರ್ಲೊಸ್ ಆಲ್ಕರಾಜ್ ಮತ್ತು ನೊವಾಕ್ ಜೊಕೊವಿಚ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.
ಭಾರತದ ಡಬಲ್ಸ್ ಅಭಿಯಾನವು ನಾಳೆ ನಡೆಯಲಿದ್ದು, ರಿತ್ವಿಕ್ ಚೌಧರಿ ಬೊಲ್ಲಿಪಲ್ಲಿ, ಎನ್. ಶ್ರೀರಾಮ್ ಬಾಲಾಜಿ ಮತ್ತು ಯೂಕಿ ಭಾಂಬ್ರಿ ಸೆಣಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV