ಖೋ ಖೋ ವಿಶ್ವಕಪ್ 2025:ಉದ್ಘಾಟನಾ ಪಂದ್ಯದಲ್ಲಿ ಭಾರತ-ನೇಪಾಳ ಸೆಣಸು
ನವದೆಹಲಿಯಲ್ಲಿಂದು ಖೋ ಖೋ ವಿಶ್ವಕಪ್ ಆರಂಭ ; ಉದ್ಘಾಟನಾ ಪಂದ್ಯದಲ್ಲಿ ಭಾರತ-ನೇಪಾಳ ಸೆಣಸು
ಉದ್ಘಾಟನಾ ಪಂದ್ಯದಲ್ಲಿ ಭಾರತ-ನೇಪಾಳ ಸೆಣಸು


ನವದೆಹಲಿ, 13ಜನವರಿ (ಹಿ.ಸ.) :

ಆ್ಯಂಕರ್ :೨೦೨೫ ರ ಖೋ ಖೋ ವಿಶ್ವಕಪ್ ಪಂದ್ಯ ಇಂದು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಆವೃತ್ತಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಆವೃತ್ತಿಯಲ್ಲಿ ೨೦ ಪುರುಷ ಮತ್ತು ೧೯ ಮಹಿಳಾ ತಂಡಗಳು ಭಾಗವಹಿಸಲಿವೆ. ಭಾರತ ಖೋ ಖೋ ಫೆಡರೇಶನ್ - ಕೆಕೆಎಫ್‌ಐ , ಪುರುಷ ಮತ್ತು ಮಹಿಳಾ ಸ್ಪರ್ಧೆಗಳಿಗೆ ತಲಾ ೧೫ ಸದಸ್ಯರ ತಂಡವನ್ನು ಪ್ರಕಟಿಸಿದೆ.

ಪ್ರತೀಕ್ ವೈಕರ್ ನೇತೃತ್ವದ ಭಾರತೀಯ ಪುರುಷರ ತಂಡವು ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್ ಜೊತೆ ಎ ಗುಂಪಿನಲ್ಲಿದೆ, ಪ್ರಿಯಾಂಕಾ ಇಂಗಲ್ ನೇತೃತ್ವದ ಮಹಿಳಾ ತಂಡವು ಇರಾನ್, ಮಲೇಷ್ಯಾ ಮತ್ತು ಕೊರಿಯಾ ಗಣರಾಜ್ಯದೊಂದಿಗೆ ಎ ಗುಂಪಿನಲ್ಲಿದೆ. ನಾಲ್ಕು ಗುಂಪುಗಳ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಜನವರಿ ೧೯ ರಂದು ಫೈನಲ್ ಪಂದ್ಯ ನಡೆಯಲಿದೆ. ಇಂದು, ಭಾರತೀಯ ಪುರುಷರ ತಂಡವು ನೇಪಾಳ ವಿರುದ್ಧ ಆರಂಭಿಕ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಪಂದ್ಯ ರಾತ್ರಿ ೮:೩೦ಕ್ಕೆ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande