ಪ್ರಯಾಗ್‌ರಾಜ್,10 ಜನವರಿ (ಹಿ.ಸ.) :
ಆ್ಯಂಕರ್ :ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿಂದು ೨೦೨೫ರ ಮಹಾಕುಂಭಕ್ಕಾಗಿ ವಿಶೇಷ ಆಕಾಶವಾಣಿಯ ವಾಹಿನಿ ಕುಂಭವಾಣಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಚಾಲನೆ ನೀಡಲಿದ್ದಾರೆ.
ಇದೇ ವೇಳೆ, ಕುಂಭ ಮಂಗಳ ದ್ವುನ್‌ಗೆ ಅವರು ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ವರ್ಚುಯಲ್ ಮೂಲಕ ಭಾಗವಹಿಸಲಿದ್ದಾರೆ.
ಕುಂಭವಾಣಿ ವಾಹಿನಿ ಇಂದಿನಿಂದ ಆರಂಭಗೊಂಡು ಫ್ರೆಬ್ರವರಿ ೨೬ರವರೆಗೆ ಕಾರ್ಯನಿರ್ವಹಿಸಲಿದೆ. ಈ ಸಮಯದಲ್ಲಿ ಬೆಳಗ್ಗೆ ೫.೫೫ ರಿಂದ ರಾತ್ರಿ ೧೦.೦೫ರ ವರೆಗೆ ಮಹಾಕುಂಭ ಮೇಳದ ಪ್ರತಿ ಚಟುವಟಿಕೆ ಆಧರಿತ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಅಮೃತ ಸ್ನಾನದ ನೇರ ವೀಕ್ಷಕ ವಿವರಣೆ ಈ ವಾಹಿನಿಯ ಮೂಲಕ ಆಲಿಸಬಹುದಾಗಿದೆ.
ಕುಂಭವಾಣಿಯ ವಾಹಿನಿಯನ್ನು ೧೦೩.೫ ತರಂಗಾಂತರ, ನ್ಯೂಸ್ ಆನ್ ಏರ್ ಆಪ್ ಹಾಗೂ ವೇವ್ಸ್ ಒಟಿಟಿ ವೇದಿಕೆಯಲ್ಲೂ ಆಲಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ