ಪ್ಲೋರಿಡಾ,11 ಜನವರಿ (ಹಿ.ಸ):
ಆ್ಯಂಕರ್:
ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜಕುಮಾರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಇಂದು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದಿದ್ದಾರೆ.ಪ್ಲೋರಿಡಾದ ಸಮುದ್ರ ತೀರದಲ್ಲಿ ಕುಟುಂಬ ಸದಸ್ಯರ ಜೊತೆ ಬೆರೆತಿರು ಕ್ಷಣಗಳನ್ನು ಅವರ ಪತ್ನಿ ಗೀತಾ ಮೊಬೈಲ್ ನಲ್ಲಿ ಸೆರೆ ಹಿಡಿದು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂತ್ರಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ಅಮೇರಿಕಾದ ಮಿಯಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇನ್ನೂ ಕೆಲ ದಿನಗಳ ಕಾಲ ಅಮೇರಿಕಾದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ದೇವರ ಹಾಗೂ ಅಭಿಮಾನಿಗಳ ಆಶೀರ್ವಾದದಿಂದ ಶಿವಣ್ಣ ಗುಣಮುಖರಾಗಿದ್ದು ಶೀಘ್ರದಲ್ಲಿ ಭಾರತಕ್ಕೆ ಮರಳುವುದಾಗಿ ಗೀತಾ ಶಿವರಾಜಕುಮಾರ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV