ಪ್ರಯಾಗ್‌ರಾಜ್,10 ಜನವರಿ (ಹಿ.ಸ.) :
ಆ್ಯಂಕರ್ :
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ೧೩ರಂದು ಆರಂಭವಾಗಲಿರುವ ಮಹಾ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಭಕ್ತರಿಗೆ ತಡೆರಹಿತ ಸಾರಿಗೆ ಸೇವೆಗಳನ್ನು ಒದಗಿಸಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ.
ಮಹಾ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್‌ಗಳ ವ್ಯವಸ್ಥೆ ಮಾಡಲಿದೆ. ೭ ಸಾವಿರ ಗ್ರಾಮೀಣ ಬಸ್‌ಗಳು ಮತ್ತು ೩೫೦ ಶಟಲ್ ಬಸ್‌ಗಳನ್ನು ನಿಯೋಜಿಸಿ, ಯಾತ್ರಾರ್ಥಿಗಳ ದಟ್ಟಣೆಯನ್ನು ನಿರ್ವಹಿಸಲಿದೆ. ಅಲ್ಲದೇ, ಸೂಕ್ತ ಬಂದೋಬಸ್ತ್‌ಗಾಗಿ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಇದೇ ೧೩ ರಿಂದ ಫೆಬ್ರವರಿ ೨೬ ರವರೆಗೆ ನಡೆಯಲಿರುವ ಮಹಾ ಕುಂಭಮೇಳಕ್ಕೆ ವಿದೇಶಿಯರು ಸೇರಿದಂತೆ ಸುಮಾರು ೪೫ ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV