ಮಹಾಕುಂಭನಗರ,10 ಜನವರಿ (ಹಿ.ಸ.) :
ಆ್ಯಂಕರ್ :
ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳವು ನಂಬಿಕೆ, ಸಂಸ್ಕೃತಿ ಮತ್ತು ಭಕ್ತಿಯ ಸಂಗಮವನ್ನು ಪ್ರತಿನಿಧಿಸುತ್ತದೆ. ಈ ಮಹಾಕುಂಭದ ವ್ಯಾಪಕ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಉತ್ತರ ಪ್ರದೇಶ ಸರಕಾರ ಮತ್ತು ಪ್ರಸಾರ ಭಾರತಿ ಹಲವಾರು ವ್ಯವಸ್ಥೆಗಳನ್ನು ಮಾಡಿದೆೆ ಎಂದು ಕೇಂದ್ರ ಪ್ರಸಾರ ಭಾರತಿ ಅಧ್ಯಕ್ಷ ಡಾ.ನವೀತ್ ಕುಮಾರ್ ಸೆಹಗಲ್ ಹೇಳಿದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿಂದು ೨೦೨೫ರ ಮಹಾಕುಂಭಕ್ಕಾಗಿ ಆಕಾಶವಾಣಿಯ ವಿಶೇಷ ವಾಹಿನಿ ಕುಂಭವಾಣಿ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟಗಳಲ್ಲಿ ಒಂದಾಗಿದ್ದು,ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ವಿದ್ಯಮಾನವಾಗಿದೆ.ಕುಂಭವಾಣಿ ವಾಹಿನಿ ಇಂದಿನಿಂದ ಆರಂಭಗೊಂಡು ಫ್ರೆಬ್ರವರಿ ೨೬ರವರೆಗೆ, ಬೆಳಗ್ಗೆ ೫.೫೫ ರಿಂದ ರಾತ್ರಿ ೧೦.೦೫ರ ವರೆಗೆ ಮಹಾಕುಂಭ ಮೇಳದ ಪ್ರತಿ ಚಟುವಟಿಕೆ ಆಧರಿತ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಅಮೃತ ಸ್ನಾನದ ನೇರ ವೀಕ್ಷಕ ವಿವರಣೆ ಇದರಲ್ಲಿ ಮೂಡಿಬರಲಿದ್ದು, ಕುಂಭವಾಣಿಯನ್ನು ೧೦೩.೫ ತರಂಗಾಂತರ, ನ್ಯೂಸ್ ಆನ್ ಏರ್ ಆಪ್ ಹಾಗೂ ವೇವ್ಸ್ ಒಟಿಟಿ ವೇದಿಕೆಯಲ್ಲೂ ಆಲಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ, ಆಕಾಶವಾಣಿ ಮಹಾನಿರ್ದೇಶಕರಾದ ಡಾ.ಪ್ರಜ್ಯಾ ಪಾಲಿವಾಲ್ ಗೌರ್, ದೂರದರ್ಶನ ನಿರ್ದೇಶಕರಾದ ಕಾಂಚನ್ ಪ್ರಸಾದ್ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV