ದೆಹಲಿ ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ನವದೆಹಲಿ,10 ಜನವರಿ (ಹಿ.ಸ.) : ಆ್ಯಂಕರ್ : ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಇದೇ ೧೭ ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ನಾಮಪತ್ರ ಹಿಂಪಡೆಯಲು ಈ ತಿಂಗಳ ೨೦ ಕೊನೆಯ ದಿನವಾಗಿದೆ. ಫೆಬ್ರವರಿ ೫
Delhi Assembly Elections


ನವದೆಹಲಿ,10 ಜನವರಿ (ಹಿ.ಸ.) :

ಆ್ಯಂಕರ್ :

ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಅಭ್ಯರ್ಥಿಗಳು ಇದೇ ೧೭ ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ನಾಮಪತ್ರ ಹಿಂಪಡೆಯಲು ಈ ತಿಂಗಳ ೨೦ ಕೊನೆಯ ದಿನವಾಗಿದೆ. ಫೆಬ್ರವರಿ ೫ ರಂದು ಮತದಾನ ನಡೆಯಲಿದ್ದು, ಫೆಬ್ರವರಿ ೮ ರಂದು ಮತ ಎಣಿಕೆ ನಡೆಯಲಿದೆ.

ದೆಹಲಿಯಲ್ಲಿ ಒಂದು ಕೋಟಿ ೫೫ ಲಕ್ಷಕ್ಕೂ ಹೆಚ್ಚು ಮತದಾರರಿದ್ದು,, ೮೩ ಲಕ್ಷಕ್ಕೂ ಹೆಚ್ಚು ಪುರುಷ ಮತದಾರರು ಮತ್ತು ೭೧ ಲಕ್ಷಕ್ಕೂ ಹೆಚ್ಚು ಮಹಿಳಾ ಮತದಾರರಿದ್ದಾರೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿಯ ಎಲ್ಲಾ ವಿಧಾನಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ, ಆದರೆ ಬಿಜೆಪಿ ಇದುವರೆಗೆ ೨೯ ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ ೪೮ ಅಭ್ಯರ್ಥಿಗಳನ್ನು ಘೋಷಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande