ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಪ್ರಯುಕ್ತ ಪೊಲೀಸರ ಪಥಸಂಚಲನ
ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಪ್ರಯುಕ್ತ ಪೊಲೀಸರ ಪಥಸಂಚಲನ
ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಸಂಬ0ಧ ಕೆಜಿಎಫ್ ಪೊಲೀಸರು ಪಥಸಂಚಲನ ನಡೆಸಿದರು.


ಕೋಲಾರ, ಸೆಪ್ಟೆಂಬರ್ ೦೭ (ಹಿ.ಸ) :

ಆ್ಯಂಕರ್ : ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಸಂಬAಧ ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ, ಕ್ಯಾಸಂಬಳ್ಳಿ, ಕಾಮಸಮುದ್ರಂ ಮತ್ತು ಬೂದಿಕೋಟೆ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಸಲಾಯಿತು.

ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಯು ಸಜ್ಜಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬೇತಮಂಗಲ, ಕ್ಯಾಸಂಬಳ್ಳಿ, ಕಾಮಸಮುದ್ರಂ ಮತ್ತು ಬೂದಿಕೋಟೆ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಪ್ರಮುಖ ಬೀದಿ ಮತ್ತು ರಸ್ತೆಗಳಲ್ಲಿ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು.

ಶನಿವಾರದಂದು ಬೇತಮಂಗಲ ವೃತ್ತ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ನೇತೃತ್ವದಲ್ಲಿ ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪಥಸಂಚಲನವು ನಡೆಸಲಾಯಿತು. ಪಥಸಂಚಲನದಲ್ಲಿ ಬೇತಮಂಗಲ ಪಿಎಸ್‌ಐ ಗುರುರಾಜ್ ಚಿಂತಾಕಲ, ಕ್ಯಾಸಂಬಳ್ಳಿ ಪಿಎಸ್‌ಐ ಸಂಗಮೇಶ್ ಕೊಲ್ಹಾರ್, ಎಎಸ್‌ಐಗಳು, ಸಿವಿಲ್ ಪೊಲೀಸ್ ಸಿಬ್ಬಂದಿಗಳು, ಕೆಎಸ್‌ಆರ್‌ಪಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಮಸಮುದ್ರಂ ವೃತ್ತ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಕಾಮಸಮುದ್ರಂ ಮತ್ತು ಬೂದಿಕೋಟೆ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪಥಸಂಚಲನವು ನಡೆಸಲಾಯಿತು. ಪಥಸಂಚಲನದಲ್ಲಿ ಆರ್‌ಪಿಐ ವಿ.ಸೋಮಶೇಖರ್, ಕಾಮಸಮುದ್ರಂ ಪಿಎಸ್‌ಐ ಕಿರಣ್‌ಕುಮಾರ್, ಬೂದಿಕೋಟೆ ಪಿಎಸ್‌ಐ ಸುನಿಲ್, ಎಎಸ್‌ಐಗಳು, ಸಿವಿಲ್ ಪೊಲೀಸ್ ಸಿಬ್ಬಂದಿಗಳು, ಕೆಎಸ್‌ಆರ್‌ಪಿ ಆರ್‌ಎಸ್‌ಐ ನಾಗರಾಜ್ ಮತ್ತು ಅವರ ತಂಡ, ಗೃಹರಕ್ಷಕ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುವವರು ಎಲ್ಲಾ ಕಾರ್ಯಕ್ರಮಗಳನ್ನು, ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಬೇಕು, ಸಾರ್ವಜನಿಕರ ಹಿತದೃಷ್ಠಿ, ಸುರಕ್ಷತೆಯನ್ನು ಮನಗಂಡು ಎಲ್ಲಾ ವ್ಯವಸ್ಥೆಗಳನ್ನು ಕ್ರಮಬದ್ದವಾಗಿ ನಿರ್ವಹಿಸುವುದು ಸಂಘಟಕರ ಜವಾಬ್ದಾರಿಯಾಗಿರುವುದರಿಂದ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಚಿತ್ರ : ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಸಂಬ0ಧ ಕೆಜಿಎಫ್ ಪೊಲೀಸರು ಪಥಸಂಚಲನ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande