ಆರ್​ಎಸ್​ಎಸ್ ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ, ತನಿಖಾ ಸಮಿತಿ ರಚಿಸಿ
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ :ಪಾಂಡವಪುರ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಸಂಘದ ಸ್ವಯಂ ಸೇವಕರ ಜೊತೆ ಅನುಚಿತವಾಗಿ ವರ್ತಿಸಿರುವ ಡಿವೈಎಸ್​ಪಿಯನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಈ ಘಟನೆ ಕುರಿತು ತನಿಖಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಬಿಜ
ಆರ್​ಎಸ್​ಎಸ್ ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ, ತನಿಖಾ ಸಮಿತಿ ರಚಿಸಿ


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ :ಪಾಂಡವಪುರ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಸಂಘದ ಸ್ವಯಂ ಸೇವಕರ ಜೊತೆ ಅನುಚಿತವಾಗಿ ವರ್ತಿಸಿರುವ ಡಿವೈಎಸ್​ಪಿಯನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಈ ಘಟನೆ ಕುರಿತು ತನಿಖಾ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಂಡವಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸ್ ಪ್ರವೇಶ ಪ್ರಕರಣ ಖಂಡನೀಯವಾಗಿದೆ. ರಾಜ್ಯದಲ್ಲಿ ಅರಾಜಕತೆ ನೆಲೆಸಿದೆ. ತುಷ್ಟೀಕರಣದ ಪರಾಕಾಷ್ಠೆ ನಡೆಯುತ್ತಿದೆ. ಪಾಂಡವಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸ್ ಅಧಿಕಾರಿ ಪ್ರವೇಶ ಮಾಡಿದ್ದಾರೆ ಸರ್ಚ್ ವಾರಂಟ್ ಇಲ್ಲದೇ ಬಂದಿದ್ದಾರೆ. ಸರ್ಚ್ ವಾರಂಟ್ ಇಲ್ಲದಿದ್ದರೂ ಸ್ಟೇಷನ್ ಡೈರಿಯಲ್ಲಿ ಸೂಕ್ತ ಕಾರಣದ ಬಗ್ಗೆ ಬರೆದು ಬರಬೇಕು. ಆದರೆ, ಪಾಂಡವರಪುರ ಆರ್​ಎಸ್​ಎಸ್ ಕಚೇರಿಗೆ ಪೊಲೀಸರು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande