ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ವಡೋದರಾದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಬುಲೆಟ್ ರೈಲು ಯೋಜನೆಯೇ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ರೈಲ್ವೇ ಇಲಾಖೆ ಸ್ಪಷ್ಟನೆ ನೀಡಿ ಬುಲೆಟ್ ರೈಲು ಯೋಜನೆ ಹಾಗೂ ವಡೋದರಾ ಪ್ರವಾಹಕ್ಕೆ ಎರಡಕ್ಕೂ ಸಂಬಂಧವಿದೆಯೇ ಎಂಬ ಮಾಹಿತಿ ಇಲ್ಲಿದೆ.
ಗುಜರಾತ್ನಲ್ಲಿ ಭಾರಿ ಮಳೆಯಾಗುತ್ತಿದೆ, ವಡೋದರಾದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹಕ್ಕೆ ಬುಲೆಟ್ ರೈಲು ಯೋಜನೆಯೇ ಕಾರಣ ಎನ್ನುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಯೋಜನೆಯ ಭಾಗವಾಗಿ ನಿರ್ಮಿಸಲಾದ ತಾತ್ಕಾಲಿಕ ಅಣೆಕಟ್ಟುಗಳಿಂದಾಗಿ ವಿಶ್ವಾಮಿತ್ರಿ ನದಿಯಲ್ಲಿ ನೀರಿನ ಹರಿವು ಹಲವಾರು ಹಂತಗಳಲ್ಲಿ ಅಡಚಣೆಯಾಗಿದೆ ಎಂದು ತೋರಿಸಲು ವೀಡಿಯೊ, ಗೂಗಲ್ ನಕ್ಷೆಗಳನ್ನು ಬಳಸಲಾಗುತ್ತಿದೆ.ಬುಲೆಟ್ ರೈಲು ನಿರ್ಮಾಣಕ್ಕಾಗಿ ಪ್ರವೇಶ ರಸ್ತೆಗಳನ್ನು ಸುಗಮಗೊಳಿಸಲು ರಚಿಸಲಾದ ಈ ಅಣೆಕಟ್ಟುಗಳು ನದಿಯ ಹರಿವನ್ನು ಕಡಿಮೆ ಮಾಡಿ ನದಿಯು ನಗರಕ್ಕೆ ಉಕ್ಕಿ ಹರಿಯುವಂತೆ ಮಾಡಿದೆ, ಇದು ಇತ್ತೀಚಿನ ಪ್ರವಾಹಕ್ಕೆ ಕಾರಣವಾಯಿತು ಎಂದು ಅದು ಸೂಚಿಸುತ್ತದೆ. ಅಡಚಣೆಯಿಂದಾಗಿ ವಡೋದರಾದಲ್ಲಿ ಭಾರಿ ಪ್ರವಾಹ ಉಂಟಾಗಿದೆ ಎಂದು ವೀಡಿಯೊ ಶೀರ್ಷಿಕೆ ಹೇಳುತ್ತದೆ.
ಇದಕ್ಕೆ ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿ,ಬುಲೆಟ್ ರೈಲು ನಿರ್ಮಾಣದಿಂದಾಗಿ ನದಿಯನ್ನು ನಿರ್ಬಂಧಿಸಲಾಗಿದೆ ಎಂದು ಸೂಚಿಸುವ ವೀಡಿಯೊ ತಪ್ಪುದಾರಿಗೆಳೆಯುವಂತಿದೆ. ಮುಂಗಾರು ಪ್ರಾರಂಭವಾಗುವ ಮೊದಲು ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ಪ್ರವೇಶ ರಸ್ತೆಯನ್ನು ತೆಗೆದುಹಾಕಲಾಯಿತು. ಸದ್ಯ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯಿಂದ ನದಿಯ ಹರಿವಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್