ಲಿಂಬೆ ಹಣ್ಣಿನ ಲಾಭಗಳು
ಹುಬ್ಬಳ್ಳಿ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರತಿ ದಿನ ಲಿಂಬೆ ಹಣ್ಣು ಉಪಯೋಗಿಸುವದರಿಂದ ಮನುಷ್ಯ ಆರೋಗಕ್ಕೆ ಹಲವಾರು ಪ್ರಯೋಜನಗಳಿವೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆರೋಗ್ಯಕರ ಹೃದಯ ಕಾಪಾಡಿಕೊಳ್ಳಲು ಪ್ರತಿ ದಿನ ಊಟದಲ್ಲಿ ಲಿಂಬೆ ಹಣ್ಣು ಬಳಸುವುದು ಉತ್ತಮ. ಸಿ
ಲಿಂಬೆ ಹಣ್ಣಿನ ಲಾಭಗಳು


ಹುಬ್ಬಳ್ಳಿ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರತಿ ದಿನ ಲಿಂಬೆ ಹಣ್ಣು ಉಪಯೋಗಿಸುವದರಿಂದ ಮನುಷ್ಯ ಆರೋಗಕ್ಕೆ ಹಲವಾರು ಪ್ರಯೋಜನಗಳಿವೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಆರೋಗ್ಯಕರ ಹೃದಯ ಕಾಪಾಡಿಕೊಳ್ಳಲು ಪ್ರತಿ ದಿನ ಊಟದಲ್ಲಿ ಲಿಂಬೆ ಹಣ್ಣು ಬಳಸುವುದು ಉತ್ತಮ. ಸಿಟ್ರಿಕ್ ಆಮ್ಲ ಹೊಂದಿರುವ ಲಿಂಬೆ ಹಣ್ಣು ಹೃದಯ ರಕ್ತನಾಳದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ರಕ್ತದ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ.

ಗಾತ್ರದಲ್ಲಿ ಲಿಂಬೆ ಹಣ್ಣು ಚಿಕ್ಕದು ಆದರೆ ಇದರಲ್ಲಿ ವಿಟಮಿನ್ ಸಿ, ಪೈಬರ್ ನಂತಹ ಪೌಷ್ಟಿಕಾಂಶಗಳು ಹೊಂದಿದ್ದು ಮಾನವನ ಆರೋಗ್ಯಕರ ಜೀವನಕ್ಕೆ ಬಹಳ ಉತ್ತಮ.

ಲಿಂಬೆಹಣ್ಣು ಲಾಲಾರಸ ಮತ್ತು ಗ್ಯಾಸ್ಟ್ರಿಕ್‌ ರಸ ಉತ್ಪಾದನೆಗೆ ಉತ್ತೇಜನ ನೀಡುತ್ತದೆ ಹೀಗಾಗಿ ಉತ್ತಮ ಜೀರ್ಣಕ್ರಿಯೆಗೆ ಸಹಾಯವಾಗಲಿದೆ ಹಾಗೂ ಮಲಬದ್ದತೆ ತಡೆಯಲು ಉತ್ತಮ ಔಷಧ.

ಮನುಷ್ಯನ ದೇಹದಲ್ಲಿ ಹೆಚ್ಚಿರುವ ಕೊಲೆಸ್ಟ್ರಾಲ್‌ ಕರಗಿಸಲು ಲಿಂಬೆ ಬಳಕೆ ಅತ್ಯುತ್ತಮ ಆಯ್ಕೆ, ತೂಕ ನಿರ್ವಹಣೆ ಮತ್ತು ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸಲು ಇದು ಸಹಾಯ ಮಾಡುತ್ತದೆ.

ಒಟ್ಟಾರೆ ಲಿಂಬೆ ಹಣ್ಣು ಪ್ರತಿ ದಿನ ಊಟದಲ್ಲಿ ಬಳಸುವುದರಿಂದ ಹಲವಾರು ಪ್ರಯೋಜನಗಳಿರುವುದು ಸತ್ಯ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande