ತಾಷ್ಕೆಂಟ್, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಉಜ್ಬೇಕಿಸ್ತಾನ್, ದ್ವಿಪಕ್ಷೀಯ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಉಜ್ಬೇಕಿಸ್ತಾನದ ಉಪಪ್ರಧಾನಮಂತ್ರಿ ಕೋಡ್‌ಜಾಯೇವ್ ಜಮ್‌ಶಿದ್ ಅಬ್ದುಖಾಕಿಮೊವಿಚ್ ತಾಷ್ಕೆಂಟ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದ ಭಾರತದಲ್ಲಿ ಬಂಡವಾಳ ಹೂಡುವ ಉಜ್ಬೇಕಿಸ್ತಾನ್ ವ್ಯಾಪಾರಸ್ಥರಿಗೆ ಹಾಗೂ ಉಜ್ಬೇಕಿಸ್ತಾನದಲ್ಲಿ ಬಂಡವಾಳ ಹೂಡುವ ಭಾರತೀಯ ವ್ಯಾಪಾರಸ್ಥರಿಗೆ ಅಂತಾರಾಷ್ಟ್ರೀಯ ಅನುಸರಣೆ ಅನ್ವಯ ಸೂಕ್ತ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಈ ಒಪ್ಪಂದ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಉಭಯ ದೇಶಗಳ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್