ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆ ವೇಳೆ ವಾಕಿ-ಟಾಕಿಗಳ ಸ್ಫೋಟ
ಬೈರುತ್, 19 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಲೆಬನಾನ್​ನಲ್ಲಿ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್​ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿದ್ದು 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೆಬನಾನ್​ನಲ್ಲಿ ಹಿಜ್ಬುಲ್ಲಾ ಬಳಸುತ್ತಿದ್ದ ಪೇಜರ್​ಗಳ ಸರಣಿ ಸ್ಫೋಟದಿಂದ 9ಕ್ಕ
ಬೈರುತ್


ಬೈರುತ್, 19 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಲೆಬನಾನ್​ನಲ್ಲಿ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್​ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿದ್ದು 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೆಬನಾನ್​ನಲ್ಲಿ ಹಿಜ್ಬುಲ್ಲಾ ಬಳಸುತ್ತಿದ್ದ ಪೇಜರ್​ಗಳ ಸರಣಿ ಸ್ಫೋಟದಿಂದ 9ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಿಜ್ಬುಲ್ಲಾ ಸದಸ್ಯರ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ವಾಕಿ-ಟಾಕಿಗಳು ಕೂಡ ಸ್ಫೋಟಗೊಂಡಿವೆ.

ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ದೃಢಪಡಿಸಿದೆ. ಹಿಜ್ಬುಲ್ಲಾಗಳು ಹೊಂದಿದ್ದ ಪೇಜರ್​ ಸಾಧನಗಳು ದೇಶದಾದ್ಯಂತ ಸ್ಫೋಟಗೊಂಡು 2,800 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.

ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ. ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ.

ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬುಲ್ಲಾ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ ಬಳಸುತ್ತಿತ್ತು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande