ಭಾವ​ನಗರದಲ್ಲಿ ಗುಜರಾತ್​ನ ಮೊತ್ತ ಮೊದಲ ಧಾನ್ಯಗಳ ಎಟಿಎಂ
ಭಾವ್​ನಗರ,19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಯಾವುದೇ ಸಂದರ್ಭದಲ್ಲಿ ಬ್ಯಾಂಕ್ ಎಟಿಎಂಗಳಿಂದ ಹಣ ಬಿಡಿಸಿಕೊಂಡು ಬರುವಂತೆ, ಯಾವುದೇ ಘಳಿಗೆಯಲ್ಲಿ ರೇಷನ್ ಪಡೆಯಬಹುದಾದ ಧಾನ್ಯಗಳ ಎಟಿಎಂ ಗುಜರಾತ್​ನ ಭಾವ್​ನಗರದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ, ಗುಜರಾತ್​ನ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿ
first grain ATM for distribution of ratio


ಭಾವ್​ನಗರ,19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಯಾವುದೇ ಸಂದರ್ಭದಲ್ಲಿ ಬ್ಯಾಂಕ್ ಎಟಿಎಂಗಳಿಂದ ಹಣ ಬಿಡಿಸಿಕೊಂಡು ಬರುವಂತೆ, ಯಾವುದೇ ಘಳಿಗೆಯಲ್ಲಿ ರೇಷನ್ ಪಡೆಯಬಹುದಾದ ಧಾನ್ಯಗಳ ಎಟಿಎಂ ಗುಜರಾತ್​ನ ಭಾವ್​ನಗರದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ, ಗುಜರಾತ್​ನ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಳವಡಿಸಲಾಗಿರುವ ಮೊತ್ತ ಮೊದಲ ಧಾನ್ಯಗಳ ಎಟಿಎಂ ಅಳವಡಿಸಿದ ಹೆಗ್ಗಳಿಕೆ ಇದು ಪಾತ್ರವಾಗಿದೆ.

ಭಾವ್​ನಗರ ನಗರದ ಕರ್ಚಲಿಯಪರ ಪ್ರದೇಶದಲ್ಲಿ ಅನ್ನಪೂರ್ತಿ ಎಂಬ ಧಾನ್ಯ ಎಟಿಎಂ ಅನ್ನು ಸಚಿವ ನಿಮುಬೆನ್ ಬಂಬಾನಿಯಾ ಉದ್ಘಾಟಿಸಿದರು. 2,500 ಕೆಜಿ ಆಹಾರ ಧಾನ್ಯಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಪಡುವವರು ದಿನದ ಯಾವುದೇ ಸಮಯದಲ್ಲಿ ಧಾನ್ಯ ಎಟಿಎಂ ಬೂತ್‌ಗೆ ಭೇಟಿ ನೀಡಬಹುದು.

ಅವರ ಪಡಿತರ ಚೀಟಿಗೆ ಪಂಚ್ ಮಾಡಬಹುದು, ಯಂತ್ರದಲ್ಲಿನ ಸ್ಕ್ಯಾನರ್ ಮೂಲಕ ತಮ್ಮ ಬೆರಳಚ್ಚು ಮೂಲಕ ಗುರುತನ್ನು ಸಾಬೀತುಪಡಿಸಬಹುದು ಮತ್ತು ಅವರ ಮಾಸಿಕ ಪಡಿತರವನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande