ಜಗತ್ತಿಗೇ ಆಹಾರ ಪೂರೈಸಲು ಭಾರತ ಸರ್ವಶಕ್ತ :ಪ್ರಲ್ಹಾದ ಜೋಶಿ
ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಆಹಾರ ಉತ್ಪಾದನೆಗೆ ಭಾರತದಲ್ಲಿ ವಿಶಾಲ ಅವಕಾಶವಿದ್ದು, ಜಗತ್ತಿಗೇ ಆಹಾರೋತ್ಪನ್ನ ಪೂರೈಸಬಹುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನವದೆಹಲಿಯಲ್ಲಿ ಇಂದು ಆಯೋಜಿಸಿದ್ದ 'ವರ್ಲ್ಡ್ ಫುಡ್ ಇಂಡಿಯಾ 2024' ಮೇಳದ ಉ
Food fair


ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಆಹಾರ ಉತ್ಪಾದನೆಗೆ ಭಾರತದಲ್ಲಿ ವಿಶಾಲ ಅವಕಾಶವಿದ್ದು, ಜಗತ್ತಿಗೇ ಆಹಾರೋತ್ಪನ್ನ ಪೂರೈಸಬಹುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನವದೆಹಲಿಯಲ್ಲಿ ಇಂದು ಆಯೋಜಿಸಿದ್ದ 'ವರ್ಲ್ಡ್ ಫುಡ್ ಇಂಡಿಯಾ 2024' ಮೇಳದ ಉದ್ಘಾಟನೆ ವೇಳೆ ಮಾತನಾಡಿ, ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವಪ್ರಸಿದ್ಧವಾಗಿದೆ ಎಂದು ಹೇಳಿದರು.

ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಸಂಸ್ಕರಣೆ ಜತೆಗೆ ಅತ್ಯುತ್ತಮ ಮಾರುಕಟ್ಟೆಯನ್ನೂ ಭಾರತ ಕಂಡುಕೊಳ್ಳುತ್ತಿದೆ ಎಂದ ಸಚಿವರು, ಹಾಲು, ಅಕ್ಕಿ, ಸಕ್ಕರೆ ಮುಂತಾದ ಆಹಾರೋತ್ಪಾದನೆಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು.

ಭಾರತದ ಆಹಾರ, ಧಾನ್ಯ ಮತ್ತು ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ ಕೃಷಿ ಉತ್ಪನ್ನಗಳ ಗುಣಮಟ್ಟದ ಸಂಸ್ಕರಣೆ, ಆಹಾರೋತ್ಪನ್ನಗಳ ಅಧಿಕ ಉತ್ಪಾದನೆಗೆ ಮುಂದಾದರೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಹೇಳಿದರು.

ಆಹಾರ ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಮಾರುಕಟ್ಟೆ ಕಂಡುಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಭಾರತ ಇದರಲ್ಲಿ ಮುಂಚೂಣಿ ಪಾತ್ರ ವಹಿಸಿದೆ ಎಂದರು.

ನಾವು ಸಾಕಷ್ಟು ಆಹಾರೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆ ಮಾಡಬಹುದು. ಅಂಥ ಅವಕಾಶ ನಮ್ಮ ರೈತರು ಮತ್ತು ಉತ್ಪಾದಕರಿಗೆ ಇದೆ. ಭವಿಷ್ಯದಲ್ಲಿ ನಾವು ಭಾರತೀಯ ಮಾರುಕಟ್ಟೆ ಹೊರತಾಗಿ ಜಗತ್ತಿಗೇ ಆಹಾರ ಪೂರೈಸಬಹುದು ಎಂದು ಹೇಳಿದರು.

ಆಹಾರ ಭದ್ರತೆ, ಸುರಕ್ಷತೆ ಮತ್ತು ಪೌಷ್ಠಿಕಾಂಶಯುಕ್ತ ಆಹಾರೋತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ನೀಡಿದ್ದಾರೆ ಎಂದರು.

ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳುವ ಜತೆಗೆ, ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಮೂಲಕ ಮೂಲಕ ನಮ್ಮ ಆಹಾರ ಸಂಸ್ಕರಣಾ ವಲಯವನ್ನು ವಿಸ್ತರಿಸಿಕೊಳ್ಳಬೇಕಿದೆ ಎಂದು ಜೋಶಿ ಹೇಳಿದರು.

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಮತ್ತು ರಾಜ್ಯ ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರೊಂದಿಗೆ ವರ್ಲ್ಡ್ ಫುಡ್ ಇಂಡಿಯಾ 2024ರ ಉದ್ಘಾಟನಾ ಸಮಾರಂಭದಲ್ಲಿ ಜೋಶಿ ಭಾಗವಹಿಸಿ ವಿವಿಧ ಅಗತೋತ್ಪನ್ನಗಳ ಪ್ರದರ್ಶನ ವೀಕ್ಷಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande