ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ:ಎಚ್ಡಿಕೆ  ರಾಜೀನಾಮೆಗೆ ಸಂತೋಷ್‌ ಲಾಡ್‌ ಆಗ್ರಹ
ಬೆಂಗಳೂರು, 19 ಸೆಪ್ಟೆಂಬರ್(ಹಿ.ಸ) : ಆ್ಯಂಕರ್ : ಬೆಂಗಳೂರಿನ ಗಂಗೇನಹಳ್ಳಿಯ ಜಮೀನು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ದಿನ
ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ:ಎಚ್ಡಿಕೆ  ರಾಜೀನಾಮೆಗೆ ಸಂತೋಷ್‌ ಲಾಡ್‌ ಆಗ್ರಹ


ಬೆಂಗಳೂರು, 19 ಸೆಪ್ಟೆಂಬರ್(ಹಿ.ಸ) :

ಆ್ಯಂಕರ್ : ಬೆಂಗಳೂರಿನ ಗಂಗೇನಹಳ್ಳಿಯ ಜಮೀನು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌ ಮತ್ತು ಕೃಷ್ಣ ಬೈರೇಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಜಮೀನು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಡಿನೋಟಿಫಿಕೇಶನ್‌ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರೂ ಕಾನೂನು ತಜ್ಞರ ಅಭಿಪ್ರಾಯ ಪಡೆಯದೇ ಡಿನೋಟಿಫಿಕೇಶನ್‌ ಮಾಡಲು ಆದೇಶ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಪಾಲುದಾರಿಕೆಯಲ್ಲಿ ಇದೆಲ್ಲ ನಡೆದಿದೆ. ಕುಮಾರಸ್ವಾಮಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.

ನೈತಿಕತೆಯ ವಿಷಯ ಬಂದಾಗ ಕುಮಾರಸ್ವಾಮಿ ಅವರು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಪ್ರತಿದಿನ ನೈತಿಕತೆ ಬಗ್ಗೆ ಪಾಠ ಮಾಡುವ ಅವರದು ಈಗ ಯಾವ ನಿಲುವು. ಇಬ್ಬರೂ ಸಹಿ ಮಾಡಿದ್ದಾರೆ. ಈಗ ಬೇಕಾದರೆ ಅವರು ನನಗೆ ನೆನಪಿಲ್ಲ, ನಾನು ಸಹಿ ಮಾಡಿಲ್ಲ ಎಂದು ಹೇಳಬಹುದು ಎಂದ ಅವರು ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರೂ ಉತ್ತರ ನೀಡಬೇಕು. ಈಗ ನಿಮ್ಮದೇ ರಾಜ್ಯಪಾಲರು ಇದ್ದಾರೆ. ಅವರಿಗೆ ಹೇಳಿ ತನಿಖೆ ಮಾಡಿಸಿ ರಾಷ್ಟ್ರಪತಿಗಳೂ ಸಹ ಮಧ್ಯಪ್ರವೇಶಿಸಲಿ ಎಂದು ಒತ್ತಾಯಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯು ಅವರ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯವರಿಗೆ ಯಾವುದೇ ದಾಖಲೆ ಇಲ್ಲ. ಈ ಪ್ರಕರಣದಲ್ಲಿ ಹಲವು ಕಡತ ಬಂದಿದ್ದರೂ ಇದನ್ನೇ ಆರಿಸಿ ಕಾನೂನು ಪ್ರಕಾರ ಡಿನೋಟಿಫಿ ಮಾಡಲು ಆಗಲ್ಲ ಎಂದು ಹೇಳಿದರೂ ಇವರು ಕಾನೂನು ತಜ್ಷರ ಅಭಿಪ್ರಾಯ ಪಡೆಯದೇ, ಎಜಿ ಅಭಿಪ್ರಾಯ ಪಡೆಯದೇ ಇವರೇ ಡಿನೋಟಿಫಿಕೇಶನ್‌ ಮಾಡಲು ಆದೇಶ ನೀಡಿದ್ದಾರೆ. ನಿಮ್ಮ ಪಾಲುದಾರಿಕೆಯಲ್ಲಿ ಏನು ನಡೆದಿದೆ ಎಂಬುದು ಬಹಿರಂಗಪಡಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande