ಪುದೀನಾ ಎಲೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ತಡೆ
ನವದೆಹಲಿ, 19 ಸೆಪ್ಟೆಂಬರ್(ಹಿ.ಸ.): ಆ್ಯಂಕರ್ : ಪುದೀನಾ ಎಲೆಯಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿರಬಹುದು. ಹಾಗಾಗಿಯೇ ಇದರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪುದೀನಾವನ್ನು ನೈಸರ್ಗಿಕ ಔಷಧೀಯ ಸಸ್ಯ ಎಂದು ಕರೆಯಲಾಗುತ್ತದ
Health Benefits of Mint Leaves kannada News


ನವದೆಹಲಿ, 19 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್ : ಪುದೀನಾ ಎಲೆಯಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿರಬಹುದು. ಹಾಗಾಗಿಯೇ ಇದರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪುದೀನಾವನ್ನು ನೈಸರ್ಗಿಕ ಔಷಧೀಯ ಸಸ್ಯ ಎಂದು ಕರೆಯಲಾಗುತ್ತದೆ.

ಇದು ನೆಗಡಿ, ಕೆಮ್ಮು, ಬಾಯಿ ಸಮಸ್ಯೆಗಳು, ಗಂಟಲು ನೋವು, ಸೈನಸ್ ಸೋಂಕುಗಳು, ಉಸಿರಾಟದ ಸೋಂಕುಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಬಾಯಿ ಅಥವಾ ಗಂಟಲಿನ ಉರಿಯೂತವನ್ನು ನಿವಾರಿಸಲು ಪುದೀನಾವನ್ನು ಔಷಧಿಯಾಗಿ ಬಳಸಬಹುದು. ಅಲ್ಲದೆ ಈ ಎಲೆ ಕ್ಯಾನ್ಸರ್ ಬೆಳವಣಿಗೆಯ ಅಂಶಗಳನ್ನು ತಡೆಯುತ್ತದೆ. ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಇದು ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ಅಲರ್ಜಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ಪುದೀನಾ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ಹೇಳುತ್ತಾರೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಪ್ರತಿದಿನ ಕನಿಷ್ಠ ಎಷ್ಟು ಎಲೆಗಳನ್ನು ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ.

ಪುದೀನಾ ಎಲೆಗಳನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:ಪ್ರತಿದಿನ ಕನಿಷ್ಠ 5- 6 ಪುದೀನಾ ಎಲೆಗಳನ್ನು ಜಗಿದು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.ಈ ಎಲೆಯ ರಸ ಅಥವಾ ಇದನ್ನು ಸೇರಿಸಿ ಮಾಡಿದ ಆಹಾರಗಳ ನಿಯಮಿತ ಸೇವನೆಯು ಎದೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪುದೀನಾದಲ್ಲಿರುವ ಮೆಂಥೋಲ್ ಡಿಕಾಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾದ ಲೋಳೆಯನ್ನು ಹೊರಹಾಕುತ್ತದೆ. ಇದರಿಂದ ಸುಲಭವಾಗಿ ಉಸಿರಾಡಬಹದು.ಪುದೀನಾದ ಔಷಧೀಯ ಗುಣಗಳು ಮತ್ತು ಅದರ ಸುವಾಸನೆ ಅರೋಮಾಥೆರಪಿಗೆ ಸಹಾಯ ಮಾಡುತ್ತದೆ. ಅದರಲ್ಲಿರುವ ಉಲ್ಲಾಸದಾಯಕ ಪರಿಮಳ ನಿಮಗೆ ಬೇಗನೆ ಶಾಂತ ಮತ್ತು ಉಲ್ಲಾಸದ ಭಾವನೆಯನ್ನು ನೀಡುತ್ತದೆ. ಪುದೀನಾ ರಸದ ಸುವಾಸನೆ ಮಾನಸಿಕ ಒತ್ತಡ, ಖಿನ್ನತೆಯನ್ನು ತ್ವರಿತವಾಗಿ ನಿವಾರಿಸುತ್ತದೆ.ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ನಾಲ್ಕರಿಂದ ಐದು ಪುದೀನಾ ಎಲೆಗಳನ್ನು ಜಗಿಯುವುದರಿಂದ ಹಲ್ಲುನೋವು, ದವಡೆ ರಕ್ತಸ್ರಾವವನ್ನು ತಡೆಯಬಹುದು. ಜೊತೆಗೆ ಇದು ಒಸಡುಗಳನ್ನು ಬಲಪಡಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.ಪುದೀನಾ ಎಲೆಗಳನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಚರ್ಮದ ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.ಪುದೀನಾ ಎಲೆಗಳ ರಸವನ್ನು ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ಆಯಾಸ, ಆಲಸ್ಯ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.ಜಜ್ಜಿದ ಪುದೀನಾ ಎಲೆಗಳು ತಲೆನೋವು ಮತ್ತು ತಲೆ ತಿರುಗುವಿಕೆಯನ್ನು ನಿವಾರಿಸುತ್ತದೆ. ಜೇನುತುಪ್ಪದೊಂದಿಗೆ ಪುದೀನಾ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande