ಬೆಂಗಳೂರಿನಲ್ಲಿ ಸಂಪಾದಿಸಿ ಮತ್ತು ಕಲಿಯಿರಿ ಗೆ ಹೆಚ್ಚಿದ ಬೇಡಿಕೆ
ಬೆಂಗಳೂರಿನಲ್ಲಿ ಸಂಪಾದಿಸಿ ಮತ್ತು ಕಲಿಯಿರಿ ಗೆ ಹೆಚ್ಚಿದ ಬೇಡಿಕೆ: ಸಂಜೆ ಕಾಲೇಜು ಶುರು ಮಾಡಲು ಜ್ಞಾನಭಾರತಿ ವಿವಿ ಚಿಂತನೆ
ಬೆಂಗಳೂರಿನಲ್ಲಿ ಸಂಪಾದಿಸಿ ಮತ್ತು ಕಲಿಯಿರಿ ಗೆ ಹೆಚ್ಚಿದ ಬೇಡಿಕೆ: ಸಂಜೆ ಕಾಲೇಜು ಶುರು ಮಾಡಲು ಜ್ಞಾನಭಾರತಿ ವಿವಿ  ಚಿಂತನೆ


ಬೆಂಗಳೂರು,17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಿಎ, ಎಂಎ, ಎಂಎಸ್​​ಸಿ, ಎಂಕಾಮ್, ಎಂಜಿನಿಯರಿಂಗ್, ಎಂಟೆಕ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಪ್ರತಿಯೊಬ್ಬ ವಿದ್ಯಾರ್ಥಿ ಕನಸು ಕಾಣುತ್ತಿರುತ್ತಾರೆ. ಆದರೆ ಬೆಂಗಳೂರಿನ ದುಬಾರಿ ಖರ್ಚುನಲ್ಲಿ ಆರ್ಥಿಕ ಸಮಸ್ಯೆಯ ಕಾರಣ ಉನ್ನತ ಶಿಕ್ಷಣ ಆಸೆ ಬಿಟ್ಟು ಕೆಲಸದ ಮೊರೆ ಹೋಗಿರುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಐಟಿಬಿಟಿ ಸೇರಿದಂತೆ ಹಲವು ಕಾರ್ಪೋರೇಟ್ ಕ್ಷೇತ್ರದ ಕಂಪನಿಗಳಲ್ಲಿ ಬಡ್ತಿ ಸೇರಿದಂತೆ ಉತ್ತಮ ವೇತನ ಪ್ಯಾಕೇಜ್​ಗೆ ಉನ್ನತ ಶಿಕ್ಷಣದ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆ ಹೆಚ್ಚಾಗಿದೆ. ಹೀಗಾಗಿ ಐಟಿ ಬಿಟಿ ಉದ್ಯೋಗಿಗಳು ಸೇರಿದಂತೆ ಸಾಕಷ್ಟು ಉದ್ಯೋಗಿಗಳು, ಸಂಪಾದಿಸಿ ಮತ್ತು ಕಲಿಯಿರಿ ಮೊರೆ ಹೋಗುತ್ತಿದ್ದಾರೆ.

ಕೆಲಸದ ಜೊತೆ ಶಿಕ್ಷಣ ಪಡೆಯಲು ಬಹುತೇಕ ಉದ್ಯೋಗಿಗಳು ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಸಂಜೆ ಕಾಲೇಜುಗಳನ್ನು ಹೆಚ್ಚಾಗಿ ಶುರು ಮಾಡಿ ಪದವಿ ಶಿಕ್ಷಣ ನೀಡಲು ಮುಂದಾಗಿದೆ. ಈ ಬಗ್ಗೆ ಜ್ಞಾನಭಾರತಿ ವಿಶ್ವವಿದ್ಯಾಲಯದ ಕುಲಪತಿ ಜಯಕರ್ ಶೆಟ್ಟಿ ಕೂಡ ಮಾಹಿತಿ ನೀಡಿದ್ದಾರೆ.

ಸಂಜೆ ಕಾಲೇಜುಗಳ ಮೂಲಕ ಸಾಕಷ್ಟು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಉದ್ಯೋಗದ ಜೊತೆ ಉನ್ನತ ಶಿಕ್ಷಣ ಕೂಡ ಪಡೆಯಲು ಮುಂದಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ ಬಹುತೇಕ ಉದ್ಯೋಗಿಗಳು ಸಂಪಾದಿಸಿ ಮತ್ತು ಕಲಿಯಿರಿ ಮೊರೆ ಹೋಗುತ್ತಿದ್ದು ಸಂಜೆ ಕಾಲೇಜು ಹೆಚ್ಚು ಶುರವಾದಷ್ಟು ಅನಕೂಲವಾಗಲಿದೆ. ಹೀಗಾಗಿ ಸರ್ಕಾರ ಸಾಕಷ್ಟು ಕೋರ್ಸ್​​​ಗಳನ್ನು ಸಂಜೆ ಕಾಲೇಜುಗಳಲ್ಲಿ ಶುರು ಮಾಡಿ ಶಿಕ್ಷಣ ನೀಡುವುದು ಒಳ್ಳೆಯ ಬೆಳವಣಿಗೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.ಚೆನ್ನಾಗಿ ಓದಬೇಕೆಂದು ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳು, ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ಈವರೆಗೆ ಓದಿನಿಂದ ದೂರ ಆಗುತ್ತಿದ್ದರು. ಆದರೆ ಈ ರೀತಿಯ ಸಂಜೆ ಕಾಲೇಜಿನ ಅವಕಾಶವನ್ನು ಬೆಂಗಳೂರು ವಿವಿ ನೀಡುತ್ತಿರುವುದು ಇವರ ಕನಸನ್ನು ನನಸಾಗಿಸುತ್ತಿದೆ ಎನ್ನಬಹುದು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande