ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಒಕ್ಕಲಿಗ ಸಂಘದ ಮುಖಂಡರ ಒತ್ತಾಯ
ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಒಕ್ಕಲಿಗ ಸಂಘದ ಮುಖಂಡರ ಒತ್ತಾಯ
ಚಿತ್ರ: ಕೋಲಾರ ತಾಲ್ಲೂಕಿನ ವಕ್ಕಲೇರಿಯಲ್ಲಿ ಸಭೆ ನಡೆಸಿ ಒಕ್ಕಲಿಗ ಸಂಘದ ಮುಖಂಡರು ಆರ್.ಆರ್.ನಗರ ಶಾಸಕ ಮುನಿರತ್ನ ರವರನ್ನು ಅನರ್ಹಗೊಳಿಸಲು ಒತ್ತಾಯಿಸಿದರು.


ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಒಕ್ಕಲಿಗ ಸಂಘದ ಮುಖಂಡರ ಒತ್ತಾಯ

ಕೋಲಾರ,ಆಗಸ್ಟ್೧೮(ಹಿಸ):ಆಂಕರ್: ಒಕ್ಕಲಿಗರು ಮತ್ತು ದಲಿತರನ್ನು ಅವಹೇಳನ ಮಾಡಿ ಮಾತನಾಡಿರುವ ಬೆಂಗಳೂರು ಮಹಾನಗರದ ಆರ್.ಆರ್.ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುನಿರತ್ನ ಆಡಿದ ಮಾತುಗಳಿಂದ ಕೆರಳಿರುವ ಒಕ್ಕಲಿಗರ ಸಂಘದ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.

ಜಾತಿ ನಿಂದನೆ, ಮಹಿಳೆಯರ ಅವಹೇಳನ ಆರೋಪದಲ್ಲಿ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ರವರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒಕ್ಕಲಿಗ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅಶೋಕ್ ಒತ್ತಾಯಿಸಿದ್ದಾರೆ.

ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯಲ್ಲಿ ಸಂಘದ ಸಭೆಯಲ್ಲಿ ಮಾತನಾಡಿ, ಮಹಿಳೆಯರಿಗೆ ದಲಿತರಿಗೆ ಹಾಗೂ ಒಕ್ಕಲಿಗ ಜಾತಿಯ ಬಗ್ಗೆ ಮುನಿರತ್ನ ಅವರು ಕೀಳಾಗಿ ಮಾತನಾಡಿದ್ದು, ಇದರಿಂದ ಎಲ್ಲಾ ಸಮುದಾಯಕ್ಕೆ ಭಾರಿ ನೋವುಂಟಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕೂಡಲೇ ಮುನಿರತ್ನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘ ಹಾಗೂ ಜಿಲ್ಲಾ ಸಂಘಗಳು ಧ್ವನಿಗೊಡಿ ಸಬೇಕು ಎಂದು ಮನವಿ ಮಾಡಿದರು.

ಒಕ್ಕಲಿಗ ಮಹಾ ಒಕ್ಕೂಟದ ಗೌರವಾಧ್ಯಕ್ಷ ಲಕ್ಷ್ಮಿಕಾಂತ್ ಗೌಡ ಹಾಗೂ ಪದಾಧಿಕಾರಿಗಳು ಇದ್ದರು.

ಈಗಾಗಲೇ ಬೆಂಗಳೂರಿನ ಜ್ಞಾನಭಾರತಿ ಪೋಲೀಸರು ಮುನಿರತ್ನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಆರೋಪಿ ಮುನಿರತ್ನ ನ್ಯಾಯಾಂಗ ಬಂದನದಲ್ಲಿದ್ದಾರೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತಿದ್ದಂತೆ ಆಂದ್ರಪ್ರದೇಶದ ಚಿತ್ತೂರಿಗೆ ಪರಾರಿಯಾಗಲು ಯತ್ನಿಸಿದ್ದರು.

ಆದರೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಬಳಿ ಚಹಾ ಸೇವಿಸಿ ಅಲ್ಲಿಂದಲೇ ಮಾಧ್ಯಮವೊಂದಕ್ಕೆ ಮೊಬೈಲ್ ಮೂಲಕ ಅಪ್ಲೋಡ್ ಮಾಡಿದ್ದರು ಅಲ್ಲದೆ ಸ್ಥಳಿಯರು ಮುನಿರತ್ನ ಅವರನ್ನು ಗುರುತಿಸಿ ಮಾಹಿತಿ ನೀಡಿದ್ದರು ಮುಳಬಾಗಿಲು ಪೋಲೀಸರು ಕಾರ್ಯಪ್ರವೃತ್ತರಾಗಿ ನಂಗಲಿ ಚೆಕ್ ಪೋಸ್ಟ್ ಬಂಧಿಸಿ ಬೆಂಗಳೂರು ಪೋಲೀಸರಿಗೆ ಒಪ್ಪಿಸಿದ್ದರು.

ಚಿತ್ರ: ಕೋಲಾರ ತಾಲ್ಲೂಕಿನ ವಕ್ಕಲೇರಿಯಲ್ಲಿ ಸಭೆ ನಡೆಸಿ ಒಕ್ಕಲಿಗ ಸಂಘದ ಮುಖಂಡರು ಆರ್.ಆರ್.ನಗರ ಶಾಸಕ ಮುನಿರತ್ನ ರವರನ್ನು ಅನರ್ಹಗೊಳಿಸಲು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande