ಹೀರೋ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ವಿರುದ್ಧ ಭಾರತ ಜಯ
ಹುಲುಮ್‌ಬೈರ್‌, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಚೀನಾದ ಹುಲುಮ್‌ಬೈರ್‌ನಲ್ಲಿ ನಡೆದಿರುವ ಪುರುಷರ ಏಷ್ಯನ್ ಹಾಕಿ ಚಾಂಪಿಯನ್ ಶಿಪ್‌ನ ಗುಂಪು ಪಂದ್ಯದಲ್ಲಿಂದು ಭಾರತ-ಪಾಕಿಸ್ತಾನ ವಿರುದ್ಧ ೨-೧ ಗೋಲುಗಳ ಜಯ ದಾಖಲಿಸಿದೆ. ಇದು ಈ ಪಂದ್ಯಾವಳಿಯಲ್ಲಿ ಭಾರತದ ಸತತ ೫ನೇ ಗೆಲುವಾಗಿದೆ. ಪಂದ್ಯದ ಪ್ರಥ
ಭಾರತ


ಹುಲುಮ್‌ಬೈರ್‌, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಚೀನಾದ ಹುಲುಮ್‌ಬೈರ್‌ನಲ್ಲಿ ನಡೆದಿರುವ ಪುರುಷರ ಏಷ್ಯನ್ ಹಾಕಿ ಚಾಂಪಿಯನ್ ಶಿಪ್‌ನ ಗುಂಪು ಪಂದ್ಯದಲ್ಲಿಂದು ಭಾರತ-ಪಾಕಿಸ್ತಾನ ವಿರುದ್ಧ ೨-೧ ಗೋಲುಗಳ ಜಯ ದಾಖಲಿಸಿದೆ.

ಇದು ಈ ಪಂದ್ಯಾವಳಿಯಲ್ಲಿ ಭಾರತದ ಸತತ ೫ನೇ ಗೆಲುವಾಗಿದೆ.

ಪಂದ್ಯದ ಪ್ರಥಮಾರ್ಧದ ೮ನೇ ನಿಮಿಷದಲ್ಲಿ ಪಾಕಿಸ್ತಾನದ ಅಹಮದ್ ನದೀಮ್ ಮೊದಲ ಗೋಲು ಹೊಡೆದರು. ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸಿದರು.

ಎ ಗುಂಪಿನ ಭಾರತ, ಪಾಕಿಸ್ತಾನ ಹಾಗೂ ಕೊರಿಯಾ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ. ಚೀನಾ ಹಾಗೂ ಜಪಾನ್ ನಡುವೆ ನಡೆಯಲಿರುವ ಮತ್ತೊಂದು ಪಂದ್ಯ ನಾಲ್ಕನೇ ಸೆಮಿಫೈನಲ್ ತಂಡವನ್ನು ನಿರ್ಧರಿಸಲಿದೆ.

ಸೆಮಿಫೈನಲ್ ಪಂದ್ಯಗಳು ನಾಳೆ ನಡೆಯಲಿದ್ದು, ಇದೇ ೧೭ರಂದು ಫೈನಲ್ಸ್ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande