ಟಿ20 ಸರಣಿ ಕ್ರಿಕೆಟ್ ಪಂದ್ಯ, ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕ
ನಾಟಿಂಗ್​ಹ್ಯಾಮ್, 17 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ. ತಂಡದ ನಾಯಕ ಜೋಸ್ ಬಟ್ಲರ್ ಗಾಯದ ಕಾರಣ ಈ ಸರಣಿಯಿಂದಲೂ ಹೊರಗುಳಿದಿದ್ದು, ಹೀಗಾಗಿ ಬ್ರೂಕ್ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ. ಇದಕ್ಕ
ಟಿ20 ಸರಣಿ ಕ್ರಿಕೆಟ್ ಪಂದ್ಯ,


ನಾಟಿಂಗ್​ಹ್ಯಾಮ್, 17 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ. ತಂಡದ ನಾಯಕ ಜೋಸ್ ಬಟ್ಲರ್ ಗಾಯದ ಕಾರಣ ಈ ಸರಣಿಯಿಂದಲೂ ಹೊರಗುಳಿದಿದ್ದು, ಹೀಗಾಗಿ ಬ್ರೂಕ್ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಜೋಸ್ ಬಟ್ಲರ್ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡವನ್ನು ಫಿಲ್ ಸಾಲ್ಟ್ ಮುನ್ನಡೆಸಿದ್ದರು. ಇದೀಗ ಐದು ಪಂದ್ಯಗಳ ಏಕದಿನ ಸರಣಿಯಿಂದಲೂ ಬಟ್ಲರ್ ಹೊರಗುಳಿದಿದ್ದು, ಹೀಗಾಗಿ ಯುವ ಸ್ಪೋಟಕ ದಾಂಡಿಗನಿಗೆ ನಾಯಕತ್ವವನ್ನು ವಹಿಸಲಾಗಿದೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ನಾಡಿದ್ದು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ ಮೈದಾನದಲ್ಲಿ ನಡೆದರೆ, ಎರಡನೇ ಪಂದ್ಯವು ಲೀಡ್ಸ್​ನಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ರಿವರ್ಸ್ ಸೈಡ್​ ಗ್ರೌಂಡ್ ಆತಿಥ್ಯವಹಿಸಲಿದೆ. ಇನ್ನು ನಾಲ್ಕನೇ ಪಂದ್ಯ ಲಾರ್ಡ್ಸ್​ನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯಕ್ಕೆ ಬ್ರಿಸ್ಟಲ್​ನ ಕೌಂಟಿ ಗ್ರೌಂಡ್ ಆತಿಥ್ಯವಹಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande