ಭಾವೈಕ್ಯತೆ ಸಾರುವ ಓಣಂ ಹಬ್ಬ: ಇಂದು ಕೇರಳದಲ್ಲಿ ಸಡಗರ, ಸಂಭ್ರಮದ ತಿರುಓಣಂ
ತಿರುವಂತಪುರಂ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೇವರ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದಲ್ಲಿ ಈಗ ಓಣಂ ಸಂಭ್ರಮ ಮನೆಮಾಡಿದೆ. ಇಂದು ತಿರು ಓಣಂ ಆಚರಣೆ ನಡೆಯಲಿದ್ದು, ನಾಡಿನಾದ್ಯಂತ ಕಾರ್ಯಕ್ರಮಗಳ ಮೂಲಕ ಸಡಗರ, ಸಂಭ್ರಮದ ಆಚರಣೆ ನಡೆಯುತ್ತಿದೆ. ಕೇರಳದ ಅತ್ಯಂತ ದೊಡ್ಡ ಮತ್ತು ಪವಿತ್ರ ಹಬ್ಬ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್ :


ತಿರುವಂತಪುರಂ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೇವರ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದಲ್ಲಿ ಈಗ ಓಣಂ ಸಂಭ್ರಮ ಮನೆಮಾಡಿದೆ. ಇಂದು ತಿರು ಓಣಂ ಆಚರಣೆ ನಡೆಯಲಿದ್ದು, ನಾಡಿನಾದ್ಯಂತ ಕಾರ್ಯಕ್ರಮಗಳ ಮೂಲಕ ಸಡಗರ, ಸಂಭ್ರಮದ ಆಚರಣೆ ನಡೆಯುತ್ತಿದೆ.

ಕೇರಳದ ಅತ್ಯಂತ ದೊಡ್ಡ ಮತ್ತು ಪವಿತ್ರ ಹಬ್ಬ ಓಣಂ ಸಡಗರ ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇಶ-ವಿದೇಶಗಳಲ್ಲಿರುವ ಕೇರಳಿಯನ್ನರು ಸಡಗರ ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಹೊಸ ಪೈರನ್ನು ಮನೆ ತುಂಬಿಸಿಕೊಳ್ಳುವ ಈ ಹಬ್ಬವನ್ನು ಮಾಲಾಯಾಳಂ ಕ್ಯಾಲೆಂಡರ್‌ನ ಚಿಂಗಂ ಮಾಸದಲ್ಲಿ ಆಚರಿಸಲಾಗುತ್ತದೆ.

ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ರಾಜ ಮಹಾಬಲಿ ಆಡಳಿತದಲ್ಲಿ ಮಹಾರಾಜ ತನ್ನ ಪ್ರಜೆಗಳ ಭೇಟಿಗಾಗಿ ಬರುವ ಕಾಲಘಟ್ಟವನ್ನು ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ. ಈ ಸಾಂಸ್ಕೃತಿಕ ಸಮಾಗಮಕ್ಕೆ ಕೇರಳದ ಎಲ್ಲ ಬೀದಿಗಳು ಸಿಂಗಾರಗೊಂಡು ಝಗಮಗಿಸುತ್ತಿವೆ. ಆದರೆ ವಾಯನಾಡ್‌ನ ಭೂಕುಸಿತ ಘಟನೆಯಿಂದಾಗಿ ಈ ಬಾರಿಯ ವಿದ್ಯುಕ್ತ ಓಣಂ ಆಚರಣೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಈ ಬಾರಿ ಓಣಂ ಹಬ್ಬವನ್ನು ಭರವಸೆಯ ನಿರೀಕ್ಷೆಯಲ್ಲಿ ನೈಸರ್ಗಿಕ ವಿಪತ್ತುಗಳಿಂದ ಮುಕ್ತಗೊಳಿಸುವ ಪ್ರಾರ್ಥನೆಯೊಂದಿಗೆ ಒಗ್ಗಟ್ಟಿನಿಂದ ಆಚರಿಸಲಾಗುತ್ತಿದೆ.

ಓಣಂ ಹಬ್ಬದಲ್ಲಿ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹಬ್ಬದ ಅಂಗವಾಗಿ ನಡೆಯುವ ಆಟ, ಮನರಂಜನಾ ಕಾರ್ಯಕ್ರಮಗಳು, ಔತಣಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬದ ದಿನಗಳಲ್ಲಿ ಮಕ್ಕಳು, ಮಹಿಳೆಯರು ತಾವು ಸಂಗ್ರಹಿಸಿದ ಹೂವುಗಳನ್ನು ಉಪಯೋಗಿಸಿ ಪೂಕಳಂ (ಹೂವಿನ ರಂಗೋಲಿ) ಬಿಡಿಸುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande