ಜಂಟಿ ಸರ್ವೆ ನಂತರ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಸಂಸದ ಮಲ್ಲೇಶ್ ಬಾಬು ಸೂಚನೆ
ಜಂಟಿ ಸರ್ವೆ ನಂತರ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಸಂಸದ ಮಲ್ಲೇಶ್ ಬಾಬು ಸೂಚನೆ
ಚಿತ್ರ - ಕೋಲಾರದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.


ಕೋಲಾರ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾಗುವ ಅಧಿಕಾರಿಗಳು ಒತ್ತುವರಿ ತೆರವಿಗು ಮುಂಚೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ನಂತರ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದ ಮಲ್ಲೇಶ್ ಬಾಬು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿತಿ ಮಾತನಾಡಿ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪುವಂತೆ ಕ್ರಮ ವಹಿಸಬೇಕಾಗಿದೆ ಆಯಾ ಇಲಾಖೆ ವ್ಯಾಪ್ತಿಯಲ್ಲಿ ಅಭಿವೃದ್ದಿಗಾಗಿ ಬೇಕಿರುವ ವರದಿಯನ್ನು ಸಿದ್ದಪಡಿಸಿ ನೀಡಿದ್ದಲ್ಲಿ ಕೇಂಧ್ರ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಕ್ರಮ ವಹಿಸುತ್ತೇನೆ ತಪ್ಪದೇ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಒಂದು ತಿಂಗಳೊಳಗೆ ವರಧಿ ಕೊಡಿ ಎಂದು ಸೂಚಿಸಿದರು.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳು ವರ್ಷಕ್ಕೆ ೮ ಕೋಟಿ ರೂ ಸಿಎಸ್.ಆರ್ ಅನುಧಾನವನ್ನು ಕೋಲಾರದ ಅಭಿವೃದ್ದಿ ನೀಡುತ್ತಿದ್ಧಾರೆ ಇತ್ತಿಚೆಗೆ ಕಂಪನಿಯೊಂದು ನರಸಾಪುರದಲ್ಲಿ ತಮ್ಮ ಚಟುವಟಿಕೆ ನಡೆಸಿ ಬೇರೋದು ರಾಜ್ಯಕ್ಕೆ ಸಿಎಸ್,ಆರ್ ಅನುದಾನ ನೀಡಿರುವುದನ್ನು ದಾಖಲೆ ಸಮೇತ ಅಧಿಕಾರಿಗಳಿಗೆ ತೋರಿಸಿದರಲ್ಲದೆ ಕೂಡಲೇ ಜಿಲ್ಲಾಧಿಕಾರಿಗಳು ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರ ಸಭೆಯನ್ನು ಹಮ್ಮಿಕೊಳ್ಳಬೇಕು ಕೈಗಾರಿಕೆಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗೆ ಹೇಳಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಕೈಗಾರಿಕೆಗಳ ಮೇಲೆ ನಿಯಂತ್ರಣ ಸಾಧಿಸಲು ನಮ್ಮ ಹಂತದಲ್ಲಿ ಹಾಗೋದಿಲ್ಲ ಕೈಗಾರಿಕೆಗಳ ಮುಖ್ಯಸ್ಥರನ್ನು ಸಭೆಗೆ ಕರೆದರೆ ಒಂದಷ್ಟು ಮಂದಿ ಮಾತ್ರ ಬರುತ್ತಾರೆ ಇದರಿಂದ ಸಿಎಸ್‌ಆರ್ ನಿಧಿ ಸಮಪರ್ಕವಾಗಿ ಬಳಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಇಂಚರ ಗೋವಿದಂರಾಜು ಮಾತನಾಡಿ ಜಿಲ್ಲೆಯಲ್ಲಿರುವ ಬೆಸ್ಕಂ ನ ಜಾಗೃತ ದಳ ಅಧಿಕಾರಿಗಳು ರೈತರ ಪಂಪ್ ಸೆಟ್ಗಳ ಮೇಲೆ ದಾಳಿ ಮಾಡಿ ಪೈನ್ ಹಾಕುವುದರ ಜೊತೆಗೆ ಪಂಪು ಮೋಟಾರುಗಳನ್ನು ಸೀಸ್ ಮಾಡುತ್ತಿದ್ದಾರೆ ರೈತರಿಗೆ ತೊಂದರೆ ನೀಡಬೇಡಿ ಎಂದು ತಾಕೀತು ಮಾಡಿದರು.

ರಾಷ್ಟ್ರೀಯ ಹೆದ್ದಾರಿ ೭೫ ಸೇರಿದಂತೆ ಮುಳಬಾಗಿಲು ಶ್ರೀನಿವಾಸಪುರ ಬಂಗಾರಪೇಟೆ ಕೆಜಿಎಫ್ ಮಾರ್ಗವಾಗಿ ಖಾಸಗಿ ಬಸ್ಗಳ ಸಂಚಾರ ಹೆಚ್ಚಾಗಿದೆ ಅದಕ್ಕೆ ಎಫ್.ಸಿ ಇದ್ಯ ಇಲ್ವ ಒಂದು ಗೊತ್ತಿಲ್ಲ ಆದರೆ ಆರ್.ಟಿ.ಓ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಖಾಸಗಿ ಬಸ್ಸಿನವರು ರಸ್ತೆ ಮಧ್ಯೆ ಸಾರಿಗೆ ಸಂಸ್ಥೆ ಬಸ್ಗಳಿಗೆ ಅಡ್ಡ ನಿಲ್ಲಿಸಿ ಕೇಳಿದರೆ ಹಲ್ಲೆ ಮಾಡಲು ಸಹ ಮುಂದಾಗುತ್ತಾರೆ ಕೂಡಲೇ ಖಾಸಗೀ ಬಸ್ಗಳ ಮೇಲೆ ಆರ್.ಟಿ.ಓ ಅಧಿಕಾರಿಗಳು ನಿಯಂತ್ರ ಸಾಧಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜೆಜೆಎಂ ಯೋಜನೆಯಲ್ಲಿ ಪ್ರತಿ ಮನೆಗೆ ಮನೆಗೆ ನಲ್ಲಿ ಮೂಲ ನೀರು ಹರಿಸುವ ಕಾಮಗಾರಿ ಕೋಲಾರ ಜಿಲ್ಲೆಯಾದ್ಯಂತ ಪ್ರಗತಿಯಲ್ಲಿ ಕಾಮಗಾರಿಯನ್ನು ಮೊದಲಿಗೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಕೊಳವೆ ಬಾವಿ ಕೊರೆಸಿ ನಂತರ ಪೈಪ್ ಲೈನ್ ಅಳವಡಿಸಬೇಕು ಅಧುಬಿಟ್ಟು ಮೊದಲು ಪೈಪ್ ಲೈನ್ ಅಳವಡಿಸಿ ನಂತರ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವುದು ಸಂಜಸವಲ್ಲ ಜೆಜೆಎಂ ಕಾಮಗಾರಿ ಹೆಸರಲ್ಲಿ ಗ್ರಾಮೀಣ ಭಾಗದಲ್ಲಿರುವ ರಸ್ತೆಗಳನ್ನು ಕಿತ್ತುಹಾಕುವುದನ್ನು ಬಿಟ್ಟು ರಸ್ತೆಯ ಕೊನೆ ಬಾಗದಲ್ಲಿ ಪೈಪ್ ಅಳವಡಿಸಿ ಎಂದು ಆದಿಕಾರಿಗಳಿಗೆ ಸಂಸದ ಮಲ್ಲೇಶ್ ಬಾಬು ಹೇಳಿದರು.

ಕೋಲಾರದಲ್ಲಿ ಸರ್ವೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಂಘವನ್ನು ಕಟ್ಟಿಕೊಂಡು ಪ್ರತಿ ಇಂತಿಷ್ಟು ಹಣ ಅವರಿಗೆ ಕೊಟ್ಟರೆ ಮಾತ್ರ ಕೋಲಾರ ಸರ್ವೆ ಕೆಲಸಗಳು ಹಾಗುತ್ತಿವೆ ಹೋಗುತ್ತಿದೆ ಈ ಕಮೀಷನ್ ಹೋಗಬೇಕು ಸೆಸೆನ್ ನಲ್ಲಿ ಕಿಂಗ್ ಮಾಸ್ಟರ್ ಆಗಿದ್ದಾನೆ ಅವನನ್ನು ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡರೆ ನೀವು ಹಾಳ್ತಾಗುತ್ತಿರಿ ನಿಮ್ಮ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡು ಇಲ್ಲಿಗೆ ಕರೆಸಿಕೊಂಡಿದ್ದೇನೆ ಎಂದು ಮುಳಬಾಗಿಲು ಶಾಸಕ ಸಮೃದ್ದಿ ಭೂಮಾಪನ ಇಲಾಖೆ ಅಧಿಕಾರಿ ಸಂಜಯ್ ಗೆ ಕಿವಿಮಾತು ಹೇಳಿದರು.

ಕೋಲಾರ ಜಿಲ್ಲೆಯ ಭೂಮಾಪನ ಅಧಿಕಾರಿಗಳು ಉಷಾರಾಗಿ ಕೆಲಸ ಮಾಡಿ, ಪ್ರಾಮಾಣಿಕ ಅಧಿಕಾರಿಯೆಂದು ನಿಮ್ಮನ್ನು ಕೋಲಾರ ಜಿಲ್ಲೆಗೆ ಕರೆಯಿಸಿಕೊಂಡಿದ್ದೇನೆ ನಿಮ್ಮ ನ್ನ ಚಿಕ್ಕಬಳ್ಳಾಪುರದಿಂದ ಕಳುಹಿಸಲು ಸಂಸದ ಸುಧಾಕರ್ ಗೆ ಇಷ್ಟವಿರಲಿಲ್ಲ ಆದರೆ ನಾನು ಸಾಕಷ್ಟು ಹೋರಾಟ ಮಾಡಿ ನಿಮ್ಮನ್ನು ಕೋಲಾರ ಜಿಲ್ಲೆಗೆ ಕರೆಯಿಸಿಕೊಂಡಿದ್ದೇನೆ ಎಂದು ಸಮೃದ್ದಿ ಸಂಜಯ್ ಗೆ ವಿವರಿಸಿದರು.

ಚಾಕರಸನಹಳ್ಳಿ ಬಳಿ ೪೦೦ ರಿಂದ ೫೦೦ ಎಕರೆ ಸರ್ಕಾರಿ ಜಮೀನು ಗುಳುಂ ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ, ಮೈಯಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡಿ ಎಂದು ಕೊತ್ತೂರು ಸಂಜಯ್ ಗೆ ಹೇಳಿದರು.

ವರ್ಷಕ್ಕೊಮ್ಮೆ ಆಚರಿಸುವ ಗಣೇಶ ಹಬ್ಬವನ್ನು ಡಿಜೆ ಹಾಕಬಾರದು ಎಂದು ಷರತ್ತು ಹಾಕುವುದು ಸರಿಯಲ್ಲ ಸಮಸ್ಯೆ ಉಂಟಾಗುತ್ತದೆ ಎಂದರೆ ಸರಿಪಡಿಸಲು ತಾನೆ ನೀವಿರೋದು ಅದನ್ನ ಸರಿಪಡಿಸಿ ಸಾಮಾಜಿಕವಾಗಿ ಎಲ್ಲಾ ಸಮುದಾಯವರಿಗೆ ಡಿಜೆ ಹಾಕುವುದನ್ನು ನಿಲ್ಲಿಸಿ ಪರಂಪರೆಯಿಂದ ಬಂದಿರುವುದನ್ನು ಏಕಾ ಏಕಿ ನಿಲ್ಲಿಸಿ ಎಂದರೆ ಯುವ ಜನತೆ ಎಲ್ಲೋಗಬೇಕು ವೈಲೆನ್ಸ್ ಹಾಗುತ್ತೆ ಎಂದರೆ ಗೈಡ್ ಲೈನ್ಸ್ ಪಿಕ್ಸ್ ಮಾಡಿ ಅದು ಬಿಟ್ಟು ಡಿಜೆ ಹಾಕಬಾರದು ಎನ್ನುವುದು ಸರಿಯಲ್ಲಿ ಇದಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಸಂವೃದ್ದಿ ಮುಂಜುನಾಥ್ ಎಸ್ಪಿ ನಿಖೀಲ್ ಗೆ ಹೇಳಿದರು.

ಜಿಲ್ಲೆಯಲ್ಲಿ ಶಿಷ್ಠಾಚಾರ ಪಾಲನೆಯಾಗುತ್ತಿಲ್ಲ ಬಂಗಾರಪೇಟೆಯಲ್ಲಿ ಪುರಸಭೆಗೆ ಕಸ ವಿಲೇವಾರಿ ಸಂಗ್ರಹ ವಾಹನ ಹಾಗೂ ಟಿಪ್ಪರ್, ಇಟಾಚಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಬಂದಿದ್ದರೂ ಸಂಸದರನ್ನು ವಾಹನಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದಿಲ್ಲ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸ ಡಿಸಿ ಶಿಷ್ಠಾಚಾರದ ಅನ್ವಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಹಾಗೊಂದು ವೇಳೆ ಶಿಷ್ಠಾಚಾರವನ್ನು ಪಾಲಿಸದ ಅಧಿಕಾರಿಗಳ ಮೇಲೆ ದೂರು ನೀಡಿ ಕೂಡಲೇ ಸಮಿತಿ ರಚನೆ ಮಾಡಿ ಅವರ ಮೇಲೆ ನಿದ್ಯಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಸಂಸದರಾಗಿ ಆಯ್ಕೆಯಾದ ಮಲ್ಲೇಶ್ ಬಾಬು ನೇತೃತ್ವದಲ್ಲಿ ನಡೆದ ಮೊದಲ ದಿಶಾ ಸಭೆಯಲ್ಲಿ ಕೆಲವು ಅಧಿಕಾರಿಗಳು ಸಭೆಯ ಉದ್ದೇಶವನ್ನೇ ಮರೆದು ಮೊಬೈಲ್ ಪೋನುಗಳಲ್ಲಿ ರೀಲ್ಸ್ ನೋಡಿಕೊಂಡು ಕಾಲ ಹರಣ ಮಾಡುತ್ತಿದ್ದದ್ದು ಕಂಡು ಬಂತು. ಸಭೆಯಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಸೇರಿದಂತೆ ಎಸ್ಪಿ ನಿಖೀಲ್ ಬಿ, ಜಿಲ್ಲಾಧಿಕಾರಿ ಅಕ್ರಂ ಪಾಷ ಜಿಲ್ಲಾಮಟ್ಟದ ಅಧಿಕಾರಿಗಳು ಬಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande