ಬೆಂಗಳೂರು, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಹತ್ತಿರ ಬಂದಿದೆ. ಸೆಪ್ಟೆಂಬರ್ 2ರಂದು ನಟ ಕಿಚ್ಚ ಅವರ ಹುಟ್ಟುಹಬ್ಬ . ಹೀಗಾಗಿ ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ಸೆಪ್ಟೆಂಬರ್ 2ರಂದು ಬೆಳ್ಳಗೆ 10 ಗಂಟೆಯಿಂದ 12ರವರಗೆ ಜಯನಗರದ ಎಂ ಇ ಎಸ್ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಪ್ರತಿ ವರ್ಷದಂತೆ ಈ ಬಾರಿಯೂ ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಬಾರಿಯ ಹುಟ್ಟು ಹಬ್ಬ ಆಚರಣೆಯಲ್ಲಿ ನಡೆದ ಗಲಾಟೆಯಂತೆ ಈ ಸಲ ನಡೆಯುವುದು ಬೇಡ ಎಂದಿದ್ದಾರೆ.
ಅದಕ್ಕಾಗಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಅನುಮತಿ ಕೊಟ್ಟಿದ್ದಾರೆ. ನನ್ನ ಹುಟ್ಟು ಹಬ್ಬದಿಂದ ಮತ್ತೊಬ್ಬರಿಗೆ ತೊಂದರೆ ಆಗವುದು ಬೇಡ. ತೊಂದರೆ ಕೊಡುವುದು ನನಗೆ ಇಷ್ಟ ಇಲ್ಲ. ಬೇರೆ ಬೇರೆ ಊರುಗಳಿಂದ ಬರುವ ಸ್ನೇಹಿತರಿಗೆ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯಾವುದೇ ಗಲಾಟೆ ಇಲ್ಲದೇ ಹುಟ್ಟು ಹಬ್ಬ ಆಚರಣೆ ಮಾಡೋಣ. ಕಳೆದ ಸಲ ನಾನು ನೋಡಿದ್ದೇನೆ. ಕೇಕ್ ಕಟ್ ಮಾಡಿದ ಬಳಿಕ ಕೇಕ್ಗೆ ಯಾವ ಸ್ಥಾನ ಇರುತ್ತೆ ಅಂತ. ಅದಕ್ಕಾಗಿ ಕೇಕ್ ಕಟ್ ಮಾಡುವ ಬದಲು ಯಾರಿಗಾದರೂ ನನ್ನ ಹೆಸರಿನ ಮೇಲೆ ಊಟ ಹಾಕಿಸಿ ಅಂತ ವಿನಂತಿ ಮಾಡಿಕೊಂಡಿದ್ದಾರೆ. ಕೆಲವರು ಕಳೆದ ಬಾರಿ ಪುಂಡಾಟ ಮಾಡಿದವರಿಗೆ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್