ಕೊಲೆ ಆರೋಪದಲ್ಲಿ ಬಾಂಗ್ಲಾದ ಮಾಜಿ ಸ್ಪೀಕರ್ ಮತ್ತು ಸಚಿವನ ಬಂಧನ
ಢಾಕಾ, 29 ಆಗಸ್ಟ್ (ಹಿ.ಸ.): ಆ್ಯಂಕರ್ : ಶೇಖ್ ಹಸೀನಾ ನೇತತ್ವದ ಸರ್ಕಾರವನ್ನು ಪದಚ್ಯುತಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅಕ್ಕಸಾಲಿಗನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಮತ್ತು ಮಾಜಿ ವಾಣಿಜ್ಯ ಸಚಿವ ಟಿಪ್ಪು ಮುನ್ಶಿ ಅವರ
ex-bangladesh-speaker-former-commerce-minister-arreste


ಢಾಕಾ, 29 ಆಗಸ್ಟ್ (ಹಿ.ಸ.):

ಆ್ಯಂಕರ್ : ಶೇಖ್ ಹಸೀನಾ ನೇತತ್ವದ ಸರ್ಕಾರವನ್ನು ಪದಚ್ಯುತಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅಕ್ಕಸಾಲಿಗನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಮತ್ತು ಮಾಜಿ ವಾಣಿಜ್ಯ ಸಚಿವ ಟಿಪ್ಪು ಮುನ್ಶಿ ಅವರನ್ನು ಬಂಧಿಸಲಾಗಿದೆ.

ರಂಗ್ಪುರದಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ 74 ವರ್ಷದ ಮುನ್ಷಿ ಅವರನ್ನು ಢಾಕಾದ ಗುಲ್ಶನ್ನಲ್ಲಿ ರಾಪಿಡ್ ಆಕ್ಷನ್ ಬೆಟಾಲಿಯನ್ ಬಂಧಿಸಿದೆ.

ಮುನ್ಶಿ ಮತ್ತು ಸಂಸತ್ತಿನ ಮಾಜಿ ಸ್ಪೀಕರ್ ಚೌಧರಿ ಸೇರಿದಂತೆ 17 ಜನರ ವಿರುದ್ಧ 38 ವರ್ಷದ ಚಿನ್ನದ ಅಕ್ಕಸಾಲಿಗ ಮುಸ್ಲಿಂ ಉದ್ದೀನ್ ಮಿಲೋನ್ ಹತ್ಯೆ ಪ್ರಕರಣ ದಾಖಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಹೆಸರು ಹೇಳಲಿಚ್ಛಿಸದ ಅನೇಕರು ಆರೋಪಿಗಳಾಗಿದ್ದಾರೆ.

ಚೌಧರಿ ಅವರು 2013 ರಿಂದ 2024ರ ಆಗಷ್ಟ ವರೆಗೆ ಬಾಂಗ್ಲಾದೇಶದ ರಾಷ್ಟ್ರೀಯ ಸಂಸದ್ನ ಮೊದಲ ಮಹಿಳಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರು.ಜುಲೈ 19 ರಂದು ರಂಗ್ಪುರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿನ ವಿವಾದಾತಕ ಕೋಟಾ ವ್ಯವಸ್ಥೆಯ ವಿರುದ್ಧದ ವಿದ್ಯಾರ್ಥಿ-ನೇತತ್ವದ ಚಳವಳಿಯ ಸಂದರ್ಭದಲ್ಲಿ ಮಿಲೋನ್ನನ್ನು ಗುಂಡಿಕ್ಕಿ ಕೊಲ್ಲಲಾಯಿತು, ಇದು ನಂತರ ಸಾಮೂಹಿಕ ದಂಗೆಯಾಗಿ ಮಾರ್ಪಟ್ಟಿತು, ಇದು ಆ. 5 ರಂದು 76 ವರ್ಷದ ಹಸೀನಾ ಅವರ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಿತು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande