ಬಳ್ಳಾರಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮಿಸಲಾತಿ ವರ್ಗೀಕರಣ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಹಿನ್ನಲೆಯಲ್ಲಿ ದಲಿತ ವರ್ಗದ ಮುಖಂಡರು ನಗರದ ಗಡಿಗೆ ಚನ್ನಪ್ಪ ವೃತ್ತದಲ್ಲಿ ಗುರುವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟು ವಿಜಯೋತ್ಸವವನ್ನು ಆಚರಿಸಿದ್ದಾರೆ.
ಕಾಂಗ್ರೆಸ್‍ನ ವೆಂಕಟೇಶ್ ಹೆಗಡೆ ಮತ್ತು ಬಿಜೆಪಿಯ ಎಚ್. ಹನುಮಂತಪ್ಪ ಅವರು ಜಂಟಿಯಾಗಿ ವಿಜಯೋತ್ಸವದಲ್ಲಿ ಪಾಲ್ಗೊಂಡು, ಸುಪ್ರೀಂ ಕೋರ್ಟ್‍ನ ತೀರ್ಪು ಐತಿಹಾಸಿಕವಾಗಿದೆ. ಅಲ್ಲದೇ, ಶೋಷಿತ ವರ್ಗಗಳ ಆಶಾಕಿರಣವಾಗಿದೆ. ಒಳ ಮೀಸಲಾತಿಯು ಸಂವಿಧಾನಬದ್ಧವಾಗಿದೆ ಎನ್ನುವುದು ಸ್ವಾಗತಾರ್ಹ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ