ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್‌​
ಪ್ಯಾರಿಸ್‌, 27 ಜುಲೈ (ಹಿ.ಸ.)​: ಆ್ಯಂಕರ್ ​: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವರುಣನ ಆರ್ಭಟದ ನಡುವೆಯು ಫ್ರಾನ್ಸ್‌ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನಡೆಸಿದೆ. ಇದೇ ಮೊದಲ ಬಾರಿಗೆ ಮೈದಾನದ ಹೊರಗೆ, ನದಿ ಮೇಲೆ ಉದ್ಘಾಟನೆಗೊಂಡ ಒಲಿಂಪಿಕ್ಸ್‌ ಕಾರ್ಯಕ್
/olympics-opening-ceremony-highlights-from-paris-torch


ಪ್ಯಾರಿಸ್‌, 27 ಜುಲೈ (ಹಿ.ಸ.)​:

ಆ್ಯಂಕರ್ ​: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವರುಣನ ಆರ್ಭಟದ ನಡುವೆಯು ಫ್ರಾನ್ಸ್‌ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನಡೆಸಿದೆ. ಇದೇ ಮೊದಲ ಬಾರಿಗೆ ಮೈದಾನದ ಹೊರಗೆ, ನದಿ ಮೇಲೆ ಉದ್ಘಾಟನೆಗೊಂಡ ಒಲಿಂಪಿಕ್ಸ್‌ ಕಾರ್ಯಕ್ರಮವಾಗಿದೆ.

ಒಲಿಂಪಿಕ್ಸ್‌ ಕಾರ್ಯಕ್ರಮ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಣ್ಣ ಬಣ್ಣದ ಲೈಟ್​ಗಳು ಆಕರ್ಷಣೆಯಾಗಿದ್ದವು. ಸ್ಪರ್ಧಿಗಳ ಸಂಭ್ರಮ, ಸಡಗರ.. ಸಿಡಿಮದ್ದುಗಳ ಸದ್ದುಗದ್ದಲ. ಡ್ಯಾನ್ಸ್​.. ಖ್ಯಾತ ಗಣ್ಯರ ಅಪೂರ್ವ ಸಮಾಗಮ ಸಮಾರಂಭದಲ್ಲಿ ಕಂಡುಬಂದವು.ಪ್ಯಾರಿಸ್​ ಒಲಂಪಿಕ್​ನ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ಸಿಟಿ ಆಫ್​ ಲವ್​ ಅಂತಾನೇ ಕರೆಯುವ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್‌​ನ ಉದ್ಘಾಟನಾ ಸಮಾರಂಭದ ಸಂಭ್ರಮ ಕಳೆಗಟ್ಟಿತ್ತು.. ಬಣ್ಣ ಬಣ್ಣದ ಬೆಳಕು, ಸಿಡಿಮದ್ದುಗಳ ಸದ್ದುಗದ್ದಲ, ಹಾಡು, ನೃತ್ಯಗಳು ಪ್ಯಾರಿಸ್​ನಲ್ಲಿ ಪುಳಕ ಹುಟ್ಟಿಸಿತ್ತು.ಜಗತ್ತಿನ ಅತಿ ದೊಡ್ಡ ಹಾಗೂ ಅದ್ಧೂರಿ ಕ್ರೀಡಾಜಾತ್ರೆ ಒಲಂಪಿಕ್ಸ್‌ಗೆ ನಿನ್ನೆ ವರ್ಣರಂಜಿತ ಚಾಲನೆ ಸಿಕ್ಕಿದೆ.

ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರಿ ಪ್ಯಾರಿಸ್‌ ನಗರದ​ಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್‌ ಉದ್ಘಾಟನೆಗೊಂಡಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯಿಂದ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭವಾಗಿದೆ. 3ನೇ ಬಾರಿಗೆ ಪ್ಯಾರಿಸ್‌ ನಗರದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆದಿದೆ.

ಪಿವಿ ಸಿಂಧು ಮತ್ತು ಶರತ್ ಕಮಲ್ ನೇತೃತ್ವದ ಭಾರತೀಯ ತಂಡ ಕೂಡಾ ದೋಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿತು.. ಬ್ಯಾಡ್ಮಿಂಟನ್‌ ತಾರೆ ಸಿಂಧು ಹಾಗೂ ದಿಗ್ಗಜ ಟೇಬಲ್‌ ಟೆನಿಸ್ ಆಟಗಾರ‌ ಶರತ್‌ ಭಾರತದ ಧ್ವಜಧಾರಿಗಳಾಗಿದ್ದರು. ಈ ವೇಳೆ ಭಾರತೀಯ ಕ್ರೀಡಾಪಟುಗಳ ಉತ್ಸಾಹ ಇಮ್ಮಡಿಗೊಂಡಿತ್ತು. ಭಾರತದಿಂದ 117 ಆಟಗಾರರು ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಂಡಿದ್ದು, ಪದಕಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande