ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಅಡ್ಡಿ ಮಳೆ
ಟೆಸ್ಟ್ ಕ್ರಿಕೆಟ್; ಬೆಂಗಳೂರಿನಲ್ಲಿಂದು ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ; ಮಳೆ ಅಡ್ಡಿ ಸಾಧ್ಯತೆ
ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :ಆ್ಯಂಕರ್ :


ಬೆಂಗಳೂರು, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.

ಪಂದ್ಯ ಬೆಳಗ್ಗೆ ೯.೩೦ರಿಂದ ಆರಂಭವಾಗಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಆದರೆ, ಪ್ರಸ್ತುತದ ಹವಾಮಾನದ ಪ್ರಕಾರ, ಇಡೀ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಅದರಲ್ಲೂ ಮೊದಲ ಎರಡು ದಿನದಾಟ ಸಂಪೂರ್ಣ ಮಳೆಗೆ ಆಹುತಿಯಾಗುವ ಆತಂಕವಿದೆ.

ನಿನ್ನೆ ಬೆಂಗಳೂರು ನಗರದೆಲ್ಲೆಡೆ ಎಡೆಬಿಡದೇ ಮಳೆ ಸುರಿದಿದೆ.ಬೆಳಗಿನಿಂದಲೂ ಸಹ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ , ಮುಂದಿನ ನಾಲ್ಕು ದಿನ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. ಮಳೆಯಿಂದಾಗಿ ನಿನ್ನೆ ಉಭಯ ತಂಡಗಳ ಅಭ್ಯಾಸ ಕೂಡ ರದ್ದಾಗಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳಬೇಕಾದರೆ, ಭಾರತೀಯ ಆಟಗಾರರು ದುರ್ಬಲವಾಗಿರುವ ಕಿವೀಸ್ ತಂಡದ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡುವುದು ಅತ್ಯಗತ್ಯ. ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಭಾರತ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande