ಟೆಸ್ಟ್ ಕ್ರಿಕೆಟ್; ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿ
ಟೆಸ್ಟ್ ಕ್ರಿಕೆಟ್; ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯದ ೩ ನೇ ದಿನದಾಟ
Chinnaswamy stadium in Bengaluru


ಬೆಂಗಳೂರು, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ೩ ನೇ ದಿನದಾಟ ಇಂದು ಬೆಳಿಗ್ಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನರಾರಂಭಗೊಳ್ಳಲಿದೆ.

೨ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ೩ ವಿಕೆಟ್ ನಷ್ಟಕ್ಕೆ ೧೮೦ ರನ್ ಗಳಿಸಿದ್ದು, ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಕ್ರೀಸ್ ನಲ್ಲಿದ್ದಾರೆ. ಕಿವೀಸ್ ಪರ ಡೆವೊನ್ ಕಾನ್ವೆ ೯೧ ರನ್ ಗಳಿಸಿದರು. ನ್ಯೂಜಿಲೆಂಡ್ ಪ್ರಸ್ತುತ ಆತಿಥೇಯರ ವಿರುದ್ಧ ೧೩೪ ರನ್‌ಗಳ ಮುನ್ನಡೆಯಲ್ಲಿದೆ.

ಇದಕ್ಕೂ ಮೊದಲು ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೪೬ ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತಕ್ಕೆ ಮೂರನೇ ಅತಿ ಕಡಿಮೆ ಟೆಸ್ಟ್ ಸ್ಕೋರ್ ಆಗಿದೆ. ಆತಿಥೇಯರ ಪರ ರಿಷಬ್ ಪಂತ್ ೨೦ ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಯಶಸ್ವಿ ಜೈಸ್ವಾಲ್ ೧೩ ರನ್ ಗಳಿಸಿದರೆ, ಐವರು ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ವಿಫಲರಾದರು

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande