ದರೋಡೆ ಪ್ರಕರಣ – ಅಗ್ನಿವೀರ್ ಸೇರಿದಂತೆ ಮೂವರ ಬಂಧನ
ಚಂಡೀಗಢ, 25 ಜುಲೈ (ಹಿ.ಸ.) : ಆ್ಯಂಕರ್ : ವಾಹನವೊಂದನ್ನು ದೋಚಿದ್ದ ಪ್ರಕರಣದಲ್ಲಿ ಅಗ್ನಿವೀರ್ ಸೇರಿದಂತೆ ಮೂವರು ಯುವಕರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಅಗ್ನಿವೀರ್ ಇಶ್ಮೀತ್ ಸಿಂಗ್, ಪ್ರಭ್ಪ್ರೀತ್ ಸಿಂಗ್ ಮತ್ತು ಬಾಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂ
agniveer-among-3-arrested-in-punjabs-mohali-i


ಚಂಡೀಗಢ, 25 ಜುಲೈ (ಹಿ.ಸ.) :

ಆ್ಯಂಕರ್ : ವಾಹನವೊಂದನ್ನು ದೋಚಿದ್ದ ಪ್ರಕರಣದಲ್ಲಿ ಅಗ್ನಿವೀರ್ ಸೇರಿದಂತೆ ಮೂವರು ಯುವಕರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಅಗ್ನಿವೀರ್ ಇಶ್ಮೀತ್ ಸಿಂಗ್, ಪ್ರಭ್ಪ್ರೀತ್ ಸಿಂಗ್ ಮತ್ತು ಬಾಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಮೂವರು ಆರೋಪಿಗಳು ಆ್ಯಪ್ ಮೂಲಕ ವಾಹನ ಬುಕ್ ಮಾಡಿದ್ದರು. ಬಳಿಕ ಚಾಲಕನಿಗೆ ಗನ್ ತೋರಿಸಿ, ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರನ್ನು‌ ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಶ್ಮೀತ್ ಸಿಂಗ್ 2022 ರಲ್ಲಿ ಅಗ್ನಿವೀರ್ ಆಗಿ ನೇಮಕಗೊಂಡಿದ್ದ. ಬಳಿಕ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿದ್ದ. ಎರಡು ತಿಂಗಳ ಹಿಂದೆ ರಜೆಯ ಮೇಲೆ ಪಂಜಾಬ್‌ನ ಫಾಜಿಲ್ಕಾಗೆ ಬಂದಿದ್ದ. ಆದರೆ ರಜೆಯ ಅವಧಿ ಮುಗಿದ ನಂತರ ಮತ್ತೆ ಕೆಲಸಕ್ಕೆ ಮರಳಿ ಹೋಗಿರಲಿಲ್ಲ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande