ಬೆಂಗಳೂರು, 24 ಜುಲೈ (ಹಿ.ಸ.) :
ಆ್ಯಂಕರ್ : ‘ಕೆಜಿಎಫ್’, ‘ಕೆಜಿಎಫ್ 2’ ಚಲನಚಿತ್ರಗಳನ್ನು ಮೂಲಕ ಹೊಸ ಅಲೆ ಎಬ್ಬಿಸಿದ ಪ್ರಶಾಂತ್ ನೀಲ್ ಈಗ ತೆಲುಗಿನಲ್ಲಿ ಬಿಡುವಿಲ್ಲದ ಕಾರ್ಯದಲ್ಲಿದ್ದು, ತೆಲುಗಿನಲ್ಲಿ ಎರಡು ಚಲನಚಿತ್ರಗಳನ್ನು ಬಾಕಿ ಇರಿಸಿಕೊಂಡಿರುವಾಗಲೇ ತಮಿಳಿಗೆ ಹಾರಲು ನೀಲ್ ಸಿದ್ಧವಾಗಿದ್ದಾರೆ.
ಪ್ರಶಾಂತ್ ನೀಲ್, ಕನ್ನಡ ಚಿತ್ರರಂಗಕ್ಕೆ ಮೂರು ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನೀಡಿ ಚಿತ್ರರಂಗದ ದಿಕ್ಕು ಬದಲಿಸಿದ ನಿರ್ದೇಶಕ. ನೀಲ್ ನಿರ್ದೇಶನದ ‘ಕೆಜಿಎಫ್’, ‘ಕೆಜಿಎಫ್ 2’ ಚಲನಚಿತ್ರಗಳನ್ನು ಕನ್ನಡ ಚಿತ್ರರಂಗವನ್ನು ಇತರೆ ಚಿತ್ರರಂಗಗಳು ನೋಡುತ್ತಿದ್ದ ರೀತಿಯನ್ನೇ ಬದಲಿಸಿದವು. ಬಳಿಕ ತೆಲುಗಿಗೆ ಹೊರಟ ನೀಲ್ ಅಲ್ಲಿ, ಪ್ರಭಾಸ್ ಜೊತೆ ಸೇರಿ ‘ಸಲಾರ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಅನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಜೂ ಎನ್ಟಿಆರ್ ಜೊತೆಗೂ ಚಲನಚಿತ್ರಗಳನ್ನು ಘೋಷಿಸಿರುವ ನೀಲ್, ಇದೀಗ ತಮಿಳಿಗೆ ಹೊರಡಲು ಸಜ್ಜಾಗಿದ್ದಾರೆ.
ತೆಲುಗಿನಲ್ಲಿ ಎರಡು ಸಿನಿಮಾ ನಿರ್ದೇಶುವುದನ್ನು ಬಾಕಿ ಉಳಿಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್ ತಮಿಳಿನ ಸ್ಟಾರ್ ನಟರೊಬ್ಬರಿಗೆ ಕತೆಯೊಂದನ್ನು ಹೇಳಿದ್ದು, ಸಿನಿಮಾ ಮಾಡಲು ಅಣಿಯಾಗಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್ ನಟ ಅಜಿತ್ ಅವರನ್ನು ನಾಯಕರನ್ನಾಗಿಸಿಕೊಂಡು ಸಿನಿಮಾ ಕಟ್ಟಲು ನೀಲ್ ಸಜ್ಜಾಗಿದ್ದಾರೆ.
ಅಜಿತ್ ಹಾಗೂ ನೀಲ್ ನಡುವೆ ಸಿನಿಮಾ ಬಗ್ಗೆ ಮಾತುಕತೆ ನಡೆದಿದ್ದು, ಅಜಿತ್ ಸಹ ಓಕೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ವಿಶೇಷವೆಂದರೆ ಅಜಿತ್ ಜೊತೆಗೆ ಎರಡು ಚಲನಚಿತ್ರಗಳನ್ನು ನೀಲ್ ನಿರ್ದೇಶನ ಮಾಡಲಿದ್ದು, ಈ ಎರಡೂಚಲನಚಿತ್ರಗಳನ್ನು ಕನ್ನಡದ ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ‘ವಿದುಮಾರ್ಚಿ’ ಚಲನಚಿತ್ರದ ಚಿತ್ರೀಕರಣದಲ್ಲಿರುವ ಅಜಿತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ನೀಲ್, ಕತೆಯನ್ನು ಒಪ್ಪಿಸಿರುವುದಲ್ಲದೆ, ಎರಡೂ ಚಿತ್ರಕ್ಕೆ ಒಟ್ಟು ಮೂರು ವರ್ಷಗಳ ದಿನಾಂಕಗಳನ್ನು ಅಜಿತ್ರಿಂದ ಕೇಳಿದ್ದಾರೆ. ಇದಕ್ಕೆ ಅಜಿತ್ ಸಹ ಒಪ್ಪಿದ್ದಾರೆ ಎನ್ನಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ