ಚಾಮರಾಜಪೇಟೆಯಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ
ಬೆಂಗಳೂರು, 21 ಜುಲೈ (ಹಿ.ಸ.) : ಆ್ಯಂಕರ್ : ‘ಕರಿಮಣಿ’ , ‘ಗಂಗೆ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಾಳೆ ನಿನ್ನೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.
director-vinod-dondales-funeral-will


ಬೆಂಗಳೂರು, 21 ಜುಲೈ (ಹಿ.ಸ.) :

ಆ್ಯಂಕರ್ : ‘ಕರಿಮಣಿ’ , ‘ಗಂಗೆ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಾಳೆ ನಿನ್ನೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

ನಾಗರಭಾವಿಯಲ್ಲಿರುವ ನಿವಾಸದಲ್ಲಿ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ಅಂತ್ಯಕ್ರಿಯೆ ನಡೆಯಲಿದೆ.

ಅಂದಹಾಗೆ, ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಪ್ರವೇಶ ಕೊಟ್ಟಿದ್ದ ಇವರು ಸದ್ಯ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande