ತ್ಯಾಗರಾಜ ನಗರದ ಸಾಯಿ ಅಧ್ಯಾತ್ಮ ಕೇಂದ್ರದ ಸಾಯಿಮಂದಿರದಲ್ಲಿ ಗುರುಪೂರ್ಣಿಮೆ
ತ್ಯಾಗರಾಜ ನಗರದ ಸಾಯಿ ಅಧ್ಯಾತ್ಮ ಕೇಂದ್ರದ ಸಾಯಿಮಂದಿರದಲ್ಲಿ ಗುರುಪೂರ್ಣಿಮೆ
ತ್ಯಾಗರಾಜ ನಗರದ ಸಾಯಿ ಅಧ್ಯಾತ್ಮ ಕೇಂದ್ರದ ಸಾಯಿಮಂದಿರದಲ್ಲಿ ಗುರುಪೂರ್ಣಿಮೆ


ಬೆಂಗಳೂರು, 21 ಜುಲೈ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ತ್ಯಾಗರಾಜ ನಗರದ ಸಾಯಿ ಅಧ್ಯಾತ್ಮ ಕೇಂದ್ರದ ಸಾಯಿಮಂದಿರದಲ್ಲಿ ಇಂದು ಗುರುಪೂರ್ಣಿಮೆಯನ್ನ ಅದ್ದೂರಿ ಯಾಗಿ ಆಚರಿಸಲಾಯಿತು. ಪೂರ್ಣ ದೇವಸ್ಥಾನವನ್ನ ಬಗೆಬಗೆಯ ಹೂವುಗಳಿಂದ ನೋಡಲು ಕಣ್ಣು ಸಾಲದಂತೆ ಕೌಶ್ಯಲ್ಯದಿಂದ ವಿವಿಧ ರೀತಿಯಲ್ಲಿ ಅಲಂಕರಿಸಲಾಗಿತ್ತು. ಸಾಯಿನಾಥ ಸ್ವಾಮಿ ದೇವರನ್ನ ಎರಡು ದಿನಗಳ ಶ್ರಮದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ವ್ಯಾಸಪೂಜೆ, 12.30ಕ್ಕೆ ಆರತಿ, ಸಂಜೆ 6ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ರಾತ್ರಿ 9ಗಂಟೆಗೆ ಶೇಜಾರತಿ ನಡೆಯಿತು, ಶನಿವಾರ ಪೂರ್ಣದಿನ ವಿವಿಧ ಸಂಘಗಳಿಂದ ಭಜನೆ ನಡೆಯಿತು. ಭಾನುವಾರ ಬೆಳಗಿನಿಂದ ರಾತ್ರಿಯವರೆಗೆ ಸುಮಾರು 60 ಸಾವಿರ ಭಕ್ತರು ಆಗಮಿಸಿ ದೇವರ ದರ್ಶನ ಆಶೀರ್ವಾದ ಪಡೆದರು, ಆಗಮಿಸಿದ ಎಲ್ಲಾ ಭಕ್ತರಿಗೂ ಬೆಳಗಿನಿಂದ ರಾತ್ರಿಯವರೆಗೆ ಉಚಿತವಾಗಿ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು. ಸಾಯಿ ಆಧ್ಯಾತ್ಮಿಕ ಕೇಂದ್ರವು ಭಕ್ತರ ನೆರವಿನಿಂದ ಈಗಾಗಲೆ ಪ್ರತಿದಿನ ಬೆಂಗಳೂರಿನ 9000 ಸಾವಿರ ಶಾಲಾ ಮಕ್ಕಳಿಗೆ ಉಚಿತವಾಗಿ ಅನ್ನ ದಾಸೋಹ ಮಾಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande