ಕೊಪ್ಪಳ, 21 ಜುಲೈ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರ ಕರ್ಕಿಹಳ್ಳಿಯಲ್ಲಿ ಗುರು ಪೌರ್ಣಿಮೆಯ ಅಂಗವಾಗಿ ಶ್ರೀ ಚಿದಂಬರೇಶ್ವರರ ೨೧ನೇ ಮಹಾರಥೋತ್ಸವವು ನೇರೆದಿದ್ದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಜರುಗಿತು.
ರವಿವಾರ ಮದ್ಯಾಹ್ನ ಮಳೆಯ ಮಧ್ಯ ಭಕ್ತರು ಹರ್ಷೋದ್ಘಾರದಿಂದ ರಥಕ್ಕೆ ಉತ್ತತ್ತಿ, ಬಾಳೆಹಣ್ನು ಸಮರ್ಪಿಸಿ ಸಂಸತ ಪಟ್ಟರು.
ಮಹಾರಥೋತ್ಸವದ ಪೂರ್ವಭಾವಿಯಾಗಿ ಭಾನುವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಮಂಗಳವಾರ ಧಾರಣಸರಸ್ವತಿ ಹೋಮ, ಮಹಾಲಕ್ಷ್ಮಿ ಹೋಮ, ೧೭ರಂದು ಆಷಾಢ ಏಕಾದಶಿಯ ಅಂಗವಾಗಿ ಕ್ಷೀರಾಭಿಷೇಕ, ತುಳಸಿ ಆರ್ಚನೆ, ಸತ್ಯನಾರಾಯಣ ವ್ರತ, ಮಹಾವಿಷ್ಣುಯಾಗ, ೧೮ರಂದು ದತ್ತ ಮೂಲ ಮಂತ್ರದಿಂದ ದತ್ತಾತ್ರೇಯ ಹೋಮ, ೧೯ರಂದು ಸಪ್ತಶತಿ ಪಾರಾಯಣ, ನವಚಂಡಿಹೋಮ ಸಂಜೆ ೫ ಗಂಟೆಗೆ ಮೃತ್ಯುಂಜಯೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
೨೦ರಂದು ಬೆಳಿಗ್ಗೆ ೧೧ ಗಂಟೆಗೆ ಉಚ್ಛಾಯ, ೨೧ರಂದು ಅಖಂಡ ವೀಣಾ ಮಂಗಳ, ಮಹಾರಥೋತ್ಸವದ ರಥಾಂಗ ಹೋಮ, ರಥ ಎಳೆಯುವುದು, ಆರತಿ, ನೈವೆದ್ಯ, ಅನ್ನಸಂತರ್ಪಣೆ ಮತ್ತು ಸಂಜೆ ಸಿಡಿಮದ್ದಿನ ಸಂಭ್ರಮದಿಂದ ಜರುಗಿತು.
ರಥೋತ್ಸವದ ಅಂಗವಾಗಿ ರವಿವಾರ ಬೆಳಿಗ್ಗೆ ಮೃತ್ಯುಂಜಯೇಶ್ವರನಿಗೆ ಅಭಿಷೇಕ, ಬುತ್ತಿಪೂಜೆ, ಮಹಾನೈವೇದ್ಯ ಜರುಗಿತು. ರಥೋತ್ಸವದಲ್ಲಿ ರಾಜ್ಯ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯ ಹಾಗೂ ಬೇರೆ ಜಿಲ್ಲೆಗಳ ಭಕ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ