ನವದೆಹಲಿ, 20 ಜುಲೈ (ಹಿ.ಸ.) :
ಆ್ಯಂಕರ್ : ಭಾರತ ವಿದೇಶಾಂಗ ಸಚಿವಾಲಯವು ಅಮೆರಿಕಾಗೆ ಭಾರತದ ಹೊಸ ರಾಯಭಾರಿಯನ್ನು ನೇಮಕ ಮಾಡಿದೆ. ವಿನಯ್ ಮೋಹನ್ ಕ್ವಾತ್ರಾ ಅವರು ಹೊಸ ರಾಯಭಾರಿಯಾಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ. ತರಂಜಿತ್ ಸಂಧು ಅವರ ನಿವೃತ್ತಿ ಬಳಿಕ ವಿನಯ್ ಮೋಹನ್ ಕ್ವಾತ್ರಾ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ವಿನಯ್ ಮೋಹನ್ ಕ್ವಾತ್ರಾರವರು 2022ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇವರು 1988ರ ಬ್ಯಾಚ್ನವರಾಗಿದ್ದು, ವಿದೇಶಾಂಗ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರು ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಯುನೈಟೆಡ್ ಸ್ಟೇಟ್, ಚೀನಾ ಮತ್ತು ಯುರೀಪಿಯನ್ ವ್ಯವಹಾರಗಳಲ್ಲಿ ಪರಿಣಿತರಾಗಿರುವ ವಿನಯ್ ಮೋಹನ್ ಕ್ವಾತ್ರಾ 2017ರಿಂದ ಫೆಬ್ರವರಿ 2020ರವರೆಗೆ ಫ್ರಾನ್ಸ್ನಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಭಾರತಕ್ಕೆ ರಫೇಲ್ ಯುದ್ಧ ವಿಮಾನ ಖರೀದಿಸಲು ಶ್ರಮಿಸಿದ್ದಾರೆ.
32 ವರ್ಷಗಳ ಅನುಭವವನ್ನು ವಿನಯ್ ಮೋಹನ್ ಕ್ವಾತ್ರಾ ಹೊಂದಿದ್ದಾರೆ. 2015 ಮತ್ತು ಆಗಸ್ಟ್ 2017ರವರೆಗೆ 2 ವರ್ಷಗಳ ಕಾಲ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿದ್ದಾರೆ
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ