ವಾಹನಗಳಿಗೆ ಫಾಸ್​ಟ್ಯಾಗ್ ಕಡ್ಡಾಯ, ಅಂಟಿಸದೇ ಹೋದರೆ ಕಪ್ಪುಪಟ್ಟಿಗೆ
ನವದೆಹಲಿ, 19 ಜುಲೈ (ಹಿ.ಸ.) : ಆ್ಯಂಕರ್ : ಹೆದ್ದಾರಿಯಲ್ಲಿ ಬಳಸುವವರು ತಮ್ಮ ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಅಂಟಿಸದೇ ಹೋದರೆ ಭಾರೀ ಬೆಲೆ ತೆರಬೇಕಾಗಬಹುದು. ಟೋಲ್ ಪ್ಲಾಜಾದಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಇ ನಿಯಮಗಳನ್ನು ಬಿಗಿಗೊಳಿಸಿ
Highway Users With No Fastag On Front Windshield


ನವದೆಹಲಿ, 19 ಜುಲೈ (ಹಿ.ಸ.) :

ಆ್ಯಂಕರ್ : ಹೆದ್ದಾರಿಯಲ್ಲಿ ಬಳಸುವವರು ತಮ್ಮ ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಅಂಟಿಸದೇ ಹೋದರೆ ಭಾರೀ ಬೆಲೆ ತೆರಬೇಕಾಗಬಹುದು. ಟೋಲ್ ಪ್ಲಾಜಾದಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಇ ನಿಯಮಗಳನ್ನು ಬಿಗಿಗೊಳಿಸಿದೆ.

ಕೆಲ ವಾಹನ ಸವಾರರು ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಅಳವಡಿಸದೇ ಇರುವುದು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಕಾರ್ಯ ನಿಧಾನಗೊಳ್ಳುತ್ತಿರುವುದು ಕಂಡು ಬಂದಿತ್ತು. ಈ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೊಸ ನಿಯಮಗಳನ್ನು ಮಾಡಿದ್ದು, ಅದರಂತೆ ಕಾರು ಅಥವಾ ಇತರ ತ್ರಿಚಕ್ರ ಮತ್ತು ನಾಲ್ಕುಚಕ್ರ ವಾಹನದ ಮುಂಭಾಗದ ಗಾಜಿನ ಮೇಲೆ ಟ್ಯಾಗ್ ಅಂಟಿಸದಿದ್ದರೆ ಅವರಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡಬೇಕೆಂದು ಅಪ್ಪಣೆ ಮಾಡಿದೆ. ಅಷ್ಟೇ ಅಲ್ಲ, ಅಂಥ ವಾಹನಗಳನ್ನು ಕಪ್ಪುಪಟ್ಟಿಗೆ ಹಾಕುವಂತೆಯೂ ಸೂಚಿಸಲಾಗಿದೆ.

ಈ ಹೊಸ ನಿಯಮಗಳ ಬಗ್ಗೆ ಎಲ್ಲಾ ಟೋಲ್ ಸಂಗ್ರಹ ಏಜೆನ್ಸಿಗಳಿಗೆ ಎಸ್​ಒಪಿ ಕಳುಹಿಸಲಾಗಿದೆ. ಹೆದ್ದಾರಿಯ ಎಲ್ಲಾ ಟೋಲ್ ಸೆಂಟರ್​​ಗಳಲ್ಲಿ ಈ ಬಗ್ಗೆ ಎಚ್ಚರಿಕೆಯ ಬೋರ್ಡ್ ಹಾಕಲಾಗುತ್ತಿದೆ. ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಅಂಟಿಸುವುದು ಅಗತ್ಯವಾಗಿದೆ. ಟೋಲ್ ಪ್ಲಾಜಾದಲ್ಲಿ ಇರುವ ಸೆನ್ಸರ್​ಗಳು ಈ ಮುಂಭಾಗದ ವಾಹನದ ಮುಂಭಾಗದ ಗಾಜಿನ ಮೇಲೆ ನಲ್ಲಿರುವ ಫಾಸ್​ಟ್ಯಾಗ್ ಅನ್ನು ಗುರುತಿಸಿ ನಿಗದಿತ ಶುಲ್ಕ ಪಡೆಯುತ್ತವೆ.

ಈ ಕಾಯುವ ರಗಳೆ ತಪ್ಪಿಸಲು ಸರ್ಕಾರ ಮಾಸ್ಟರ್​ಪ್ಲಾನ್

ಫಾಸ್​ಟ್ಯಾಗ್ ನಿಯಮ ಪಾಲಿಸದವರಿಗೆ ಸಿಸಿಟಿವಿ ಕಣ್ಗಾವಲು

ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಅಳವಡಿಸದೇ ಇರುವ ವಾಹನಗಳ ಮೇಲೆ ನಿಗಾ ಇಡಲು ಎಲ್ಲಾ ಟೋಲ್ ಪ್ಲಾಜಾ ಬಳಿ ಇರುವ ಸಿಸಿಟಿವಿಯನ್ನು ಬಳಸಲಾಗುತ್ತದೆ. ಫಾಸ್​ಟ್ಯಾಗ್ ಅನ್ನು ಸರಿಯಾಗಿ ಹಾಕದ ವಾಹನಗಳ ರಿಜಿಸ್ಟ್ರೇಶನ್ ನಂಬರ್ ಅನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಪಡೆಯಲಾಗುತ್ತದೆ. ಇಂಥ ವಾಹನಗಳಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಾತಿ ಆಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೆದ್ದಾರಿ ಪ್ರಾಧಿಕಾರ ಕೊಟ್ಟಿರುವ ಎಸ್​ಒಪಿ ಪ್ರಕಾರ ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್​ಟ್ಯಾಗ್ ಹೊಂದಿರದ ವಾಹನಗಳು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಮೂಲಕ ಹಣ ಪಾವತಗೆ ಅವಕಾಶ ಇರುವುದಿಲ್ಲ. ಎರಡು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಹಾಗೆಯೇ, ಇಂಥ ವಾಹನಗಳನ್ನು ಕಪ್ಪು ಪಟ್ಟಿಗೆ ಹಾಕಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande